ADVERTISEMENT

ರೇವಾ ಕಾರ್‌ ಕಂಪನಿ ಪ್ರವರ್ತಕ ಎಸ್‌.ಕೆ. ಮೈನಿ ನಿಧನ

ಪಿಟಿಐ
Published 28 ಡಿಸೆಂಬರ್ 2020, 14:24 IST
Last Updated 28 ಡಿಸೆಂಬರ್ 2020, 14:24 IST

ಬೆಂಗಳೂರು: ದೇಶದ ಮೊದಲ ವಿದ್ಯುತ್‌ ಚಾಲಿತ ಕಾರ್‌ ತಯಾರಿಸುವ ರೇವಾ ಕಂಪನಿಯ ಪ್ರವರ್ತಕ ಹಾಗೂ ಮೈನಿ ಗ್ರೂಪ್‌ನ ಸ್ಥಾಪಕ ಡಾ. ಸುದರ್ಶನ್ ಕುಮಾರ್ ಮೈನಿ ಅವರು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಸೋಮವಾರ ತಿಳಿಸಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ 87 ವರ್ಷದ ಮೈನಿ ಅವರು ತಮ್ಮ ಬೆಂಗಳೂರು ನಿವಾಸದಲ್ಲಿ ಡಿ. 26ರಂದು ನಿಧನರಾಗಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರಿಗೆ ಪತ್ನಿ ರೇವಾ ಮತ್ತು ಮೂವರು ಮಕ್ಕಳಿದ್ದಾರೆ.

ರೇವಾ ಕಾರ್‌ ಅನ್ನು ತಯಾರಿಸಲು ಮಗ ಚೇತನ್‌ ಮೈನಿ ಅವರಿಗೆ ಸುದರ್ಶನ್ ಪ್ರೋತ್ಸಾಹ ನೀಡಿದ್ದರು. ಸುದರ್ಶನ್ ಅವರ ಪತ್ನಿಯ ಹೆಸರನ್ನೇಕಾರಿಗೆ ಇಡಲಾಗಿದೆ. 2010ರಲ್ಲಿ ರೇವಾ ಕಂಪನಿಯನ್ನು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಖರೀದಿಸಿತು.

ADVERTISEMENT

1967 ರಿಂದ ಆರು ವರ್ಷಗಳವರೆಗೆ ಬೆಂಗಳೂರಿನಲ್ಲಿ ಮೈಕೊ–ಬಾಷ್‌ ಕಂಪನಿಯಲ್ಲಿ ಜನರಲ್‌ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿದ್ದರು. ಬಳಿಕ 1973ರಲ್ಲಿ ತಮ್ಮದೇ ಆದ ಮೈನಿ ಗ್ರೂಪ್‌ ಸ್ಥಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.