ADVERTISEMENT

ಭಾರತದಲ್ಲಿ ಲ್ಯಾಪ್‌ಟಾಪ್ ತಯಾರಿಕೆ ಆರಂಭಿಸಿದ ಸ್ಯಾಮ್ಸಂಗ್‌

ಪಿಟಿಐ
Published 17 ಆಗಸ್ಟ್ 2025, 16:20 IST
Last Updated 17 ಆಗಸ್ಟ್ 2025, 16:20 IST
ಸ್ಯಾಮ್ಸಂಗ್‌
ಸ್ಯಾಮ್ಸಂಗ್‌   

ನವದೆಹಲಿ: ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತಯಾರಿಸುವ ಕೊರಿಯಾದ ಕಂಪನಿ ಸ್ಯಾಮ್ಸಂಗ್‌, ಗ್ರೇಟರ್ ನೊಯಿಡಾದಲ್ಲಿನ ತನ್ನ ಘಟಕದಲ್ಲಿ ಲ್ಯಾಪ್‌ಟಾಪ್‌ ತಯಾರಿಕೆಯನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಘಟಕದಲ್ಲಿ ಕಂಪನಿಯು ಫೀಚರ್ ಫೋನ್‌ಗಳು, ಸ್ಮಾರ್ಟ್‌ಫೋನ್‌ಗಳು, ಧರಿಸಬಹುದಾದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಸುತ್ತದೆ.

ಈ ಕುರಿತು ಕಂಪನಿಗೆ ಕಳಿಸಿದ ಇ–ಮೇಲ್‌ಗೆ ಪ್ರತಿಕ್ರಿಯೆ ಬಂದಿಲ್ಲ. ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯು ತನ್ನ ತಯಾರಿಕಾ ಘಟಕವನ್ನು 1996ರಲ್ಲಿ ಸ್ಥಾಪನೆ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.