ADVERTISEMENT

ಎಸ್‌ಬಿಐ: ಸಾಲದ ಬಡ್ಡಿದರ, ಸ್ಥಿರ ಠೇವಣಿ ಬಡ್ಡಿದರ ಇಳಿಕೆ 

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 9:31 IST
Last Updated 9 ಸೆಪ್ಟೆಂಬರ್ 2019, 9:31 IST
   

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಾಲದ ಬಡ್ಡಿದರ (ಎಂಸಿಎಲ್‌ಆರ್) ಶೇ0.10 ರಷ್ಟು (10 ಬೇಸಿಸ್ ಅಂಕ) ಇಳಿಕೆ ಮಾಡಿದೆ.

ಸೆಪ್ಟೆಂಬರ್ 10ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಸೆಪ್ಟೆಂಬರ್ 10ರಿಂದ ಎಸ್‌ಬಿಐ ಎಂಸಿಎಲ್‌ಆರ್ ದರ ಶೇ 8.15 ಆಗಲಿದೆ. ಈ ಹಿಂದೆ ಇದು ಶೇ 8.25 ಆಗಿತ್ತು.

2019-20 ಆರ್ಥಿಕ ವರ್ಷದಲ್ಲಿ ಎಸ್‌ಬಿಐ 5ನೇ ಬಾರಿ ಈ ರೀತಿ ಎಂಸಿಎಲ್‌ಆರ್ ದರ ಇಳಿಕೆ ಮಾಡಿದೆ. ಇನ್ನುಳಿದ ಬ್ಯಾಂಕ್‌ಗಳೂ ಎಂಸಿಎಲ್‌ಆರ್ ದರ ಇಳಿಸುವ ಸಾಧ್ಯತೆ ಇದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.

ADVERTISEMENT

ಎಸ್‌ಬಿಐ ಗೃಹ ಸಾಲ ಮತ್ತು ವಾಹನ ಸಾಲ ಮಾರುಕಟ್ಟೆಯಲ್ಲಿ ಕ್ರಮವಾಗಿ ಶೇ35 ಮತ್ತು ಶೇ 36 ಪಾಲು ಹೊಂದಿರುವುದಾಗಿ ತಿಳಿಸಿದೆ.

ಗೃಹ ಸಾಲ ಬಡ್ಡಿ ದರ ಅಗ್ಗ
ಎಂಸಿಎಲ್‌ಆರ್ ದರ ಇಳಿಕೆಮಾಡಿದ್ದರಿಂದ ಗೃಹ ಸಾಲ ಬಡ್ಡಿದರ ಇಳಿಕೆಯಾಗಲಿದೆ.

ಸ್ಥಿರ ಠೇವಣಿ ಬಡ್ಡಿ ದರವೂ ಇಳಿಕೆ

ರೆಪೊ ದರದ ಬದಲಾವಣೆಗೆ ತಕ್ಕಂತೆ ಬಡ್ಡಿದರದಲ್ಲಿ ಬದಲಾವಣೆ ಮಾಡಿರುವ ಎಸ್‌ಬಿಐ ಸಾಲದ ಬಡ್ಡಿದರ ಇಳಿಕೆಯೊಂದಿಗೆ ಠೇವಣಿ ಬಡ್ಡಿದರವೂ ಇಳಿಕೆ ಮಾಡಿದೆ. 20 -25 ಬೇಸಿಸ್ ಪಾಯಿಂಟ್ ಇಳಿಕೆಯಾಗಿದ್ದು,ಸೆಪ್ಟೆಂಬರ್ 10 ರ ನಂತರ ಸ್ಥಿರ ಠೇವಣಿ ಬಡ್ಡಿದರ ಶೇ 6.70 ನಿಂದ ಶೇ 6.50 ಕ್ಕೆ(ಒಂದು ವರ್ಷದಿಂದ 2 ವರ್ಷದ ವರೆಗೆ ) ಇಳಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.