ADVERTISEMENT

ಕೋವಿಡ್-19 | ಸರ್ಕಾರಿ ಆಸ್ಪತ್ರೆಗೆ ಎಸ್‌ಬಿಐ ಕೊಡುಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 17:08 IST
Last Updated 2 ಜುಲೈ 2020, 17:08 IST
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರಿಗೆ  ಎಸ್‌ಬಿಐನ ಬೆಂಗಳೂರು ವೃತ್ತದ ಚೀಫ್‌ ಜನರಲ್‌ ಮ್ಯಾನೇಜರ್‌ ಅಭಿಜೀತ್‌ ಮಜುಂದಾರ್‌ ಅವರು ಕೋವಿಡ್‌ ಚಿಕಿತ್ಸಾ ಸಾಧನ ಹಸ್ತಾಂತರಿಸಿದರು
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರಿಗೆ  ಎಸ್‌ಬಿಐನ ಬೆಂಗಳೂರು ವೃತ್ತದ ಚೀಫ್‌ ಜನರಲ್‌ ಮ್ಯಾನೇಜರ್‌ ಅಭಿಜೀತ್‌ ಮಜುಂದಾರ್‌ ಅವರು ಕೋವಿಡ್‌ ಚಿಕಿತ್ಸಾ ಸಾಧನ ಹಸ್ತಾಂತರಿಸಿದರು   

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ತನ್ನ 65ನೇ ಬ್ಯಾಂಕ್‌ ದಿನಾಚರಣೆ ಅಂಗವಾಗಿ ಕೋವಿಡ್‌ ಪೀಡಿತರ ಚಿಕಿತ್ಸೆಗೆ ನೆರವಾಗುವ ಆಮ್ಲಜನಕ ಪೂರೈಸುವ ‘ಎಚ್‌ಎಫ್‌ಎನ್‌ಸಿ‘ ಸಲಕರಣೆಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದೆ.

ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕಾರ್ಯಕ್ರಮದಡಿ ₹ 26 ಲಕ್ಷ ವೆಚ್ಚದಲ್ಲಿ ಈ ಸಲಕರಣೆಗಳನ್ನು ಪೂರೈಸಿದೆ.

‘ಕೋವಿಡ್‌ ಪರಿಹಾರ ಕಾರ್ಯಕ್ರಮಗಳಿಗಾಗಿ ಬ್ಯಾಂಕ್‌ ರಾಜ್ಯ ಸರ್ಕಾರಕ್ಕೆ ಇದುವರೆಗೆ ₹ 75.49 ಲಕ್ಷ ಮೊತ್ತದ ನೆರವು ನೀಡಿದೆ. ಶೀಘ್ರದಲ್ಲಿಯೇ ಸರ್ಕಾರಿ ಮತ್ತು ಸೇನೆಯ ಆಸ್ಪತ್ರೆಗಳಿಗೆ 10 ವೆಂಟಿಲೇಟರ್‌ಗಳನ್ನು ವಿತರಿಸಲಿದೆ’ ಎಂದು ಬ್ಯಾಂಕ್‌ನ ಬೆಂಗಳೂರು ವೃತ್ತದ ಚೀಫ್‌ ಜನರಲ್‌ ಮ್ಯಾನೇಜರ್‌ ಅಭಿಜೀತ್‌ ಮಜುಂದಾರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.