ADVERTISEMENT

ಎಸ್‌ಬಿಐ: ಗೃಹ, ವಾಹನ ಸಾಲ ತುಟ್ಟಿ

ಪಿಟಿಐ
Published 1 ಸೆಪ್ಟೆಂಬರ್ 2018, 17:07 IST
Last Updated 1 ಸೆಪ್ಟೆಂಬರ್ 2018, 17:07 IST
   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶನಿವಾರದಿಂದಲೇ ಅನ್ವಯಿಸುವಂತೆ ಮೂರು ವರ್ಷಗಳವರೆಗಿನ ಅವಧಿ ಸಾಲಗಳ ಮೇಲಿನ ಬಡ್ಡಿದರವನ್ನುಶೇ 0.2 ರಷ್ಟು ಹೆಚ್ಚಿಸಿದೆ.

ಇದರಿಂದ ಗೃಹ, ವಾಹನ ಮತ್ತು ಇತರೆ ಸಾಲಗಳ ತಿಂಗಳ ಸಮಾನ ಕಂತುಗಳ (ಇಎಂಐ) ಮೊತ್ತದಲ್ಲಿ ಏರಿಕೆಯಾಗಲಿದೆ.

ಬೇರೆ ಬ್ಯಾಂಕ್‌ಗಳು ಸಹ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇದೆ.

ADVERTISEMENT

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವಾದ ರೆಪೊ ದರವನ್ನು ಹೆಚ್ಚಿಸಿದ ಒಂದು ತಿಂಗಳ ನಂತರ ಎಸ್‌ಬಿಐ ತನ್ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌)ಬಡ್ಡಿದರವನ್ನು ಹೆಚ್ಚಿಸಿದೆ.

ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನುಶೇ 0.25 ರಷ್ಟು ಹೆಚ್ಚಿಸಿತ್ತು. ಇದರಿಂದ ಸಾಲ ನೀಡಿಕೆ ದರವು ಶೇ 6.5ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.