ADVERTISEMENT

24ರಿಂದ ಎಸ್‌ಬಿಐ ಆನ್‌ಲೈನ್‌ ಹೋಮ್‌ ಕಾರ್ನಿವಲ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 20:55 IST
Last Updated 20 ಆಗಸ್ಟ್ 2020, 20:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಬೆಂಗಳೂರಿನಲ್ಲಿ ಇದೇ 24 ರಿಂದ ಒಂದು ತಿಂಗಳವರೆಗೆ (ಸೆ.24ರವರೆಗೆ) ಎಸ್‌ಬಿಐ ಆನ್‌ಲೈನ್‌ ಹೋಮ್‌ ಕಾರ್ನಿವಲ್‌ ಹಮ್ಮಿಕೊಂಡಿದೆ. ಇದಕ್ಕಾಗಿ ದೇಶದ ಪ್ರಮುಖ ಆನ್‌ಲೈನ್‌ ಕಂಪನಿ ಅಡ್ಡಾಕಾರ್ನರ್‌ ಜತೆ ಪಾಲುದಾರಿಕೆ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವಲಯಕ್ಕೆ ಚೇತರಿಕೆ ನೀಡುವ ಉದ್ದೇಶದೊಂದಿಗೆ ಇದನ್ನು ಆಯೋಜಿಸಲಾಗುತ್ತಿದೆ. ಜನರು ತಾವಿರುವಲ್ಲಿಂದಲೇ ಅಡ್ಡಾಕಾರ್ನರ್‌ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿರುವ ವಸತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬದಾಗಿದೆ.

‘ಮಾರಾಟಗಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಹುದಾಗಿದ್ದು, ಬೆಲೆಯ ಬಗ್ಗೆ ಚೌಕಾಸಿ ಮಾಡಬಹುದು. ಮನೆ ಖರೀದಿಸುವ ಆಸಕ್ತಿ ಉಳ್ಳ ಹಲವರು ಸೇರಿಕೊಂಡರೆ ಆಗ ಬೆಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೂ ಸಾಧ್ಯವಿದೆ’ ಎಂದು ಅಡ್ಡಾಕಾರ್ನರ್‌ನ ಸಹ ಸ್ಥಾಪಕ ಸುಮಿತ್‌ ಶ್ರೀವಾಸ್ತವ್ ತಿಳಿಸಿದರು.

ADVERTISEMENT

‘ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು, ಮನೆ ಖರೀದಿಸುವ ಕುರಿತಾದ ಆಸಕ್ತಿ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಗೃಹ ಸಾಲದ ಬಡ್ಡಿದರ ಕಡಿಮೆ ಮಟ್ಟದಲ್ಲಿದೆ. ಹೀಗಾಗಿ ಸ್ವಂತ ಮನೆ ಹೊಂದುವವರಿಗೆ ಇದು ಶುಭ ಸುದ್ದಿಯಾಗಿದೆ’ ಎಂದು ಎಸ್‌ಬಿಐನ ಸಿಜಿಎಂ ಅಭಿಜಿತ್‌ ಮಜುಂದಾರ್‌ ಹೇಳಿದರು.

ಬ್ರಿಗೇಡ್‌ ಸಮೂಹ, ಪುರವಂಕರ, ಶ್ರೀರಾಮ್‌ ಪ್ರಾಪರ್ಟೀಸ್‌, ಸಾಲರ್‌ಪುರಿಯಾ, ಡಿಎಕ್ಸ್‌ ಮ್ಯಾಕ್ಸ್‌ ಸೇರಿದಂತೆ ಇನ್ನೂ ಹಲವು ಪ್ರಮುಖ ಕಂಪನಿಗಳು ತಮ್ಮ ಯೋಜನೆಗಳನ್ನು ಪ್ರದರ್ಶಿಸಲಿವೆ.

ಮಾಹಿತಿಗೆ: addacorner.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.