ADVERTISEMENT

ಎಸ್‌ಬಿಐ ಲಾಭ ಶೇ 7ರಷ್ಟು ಇಳಿಕೆ

ಪಿಟಿಐ
Published 4 ಫೆಬ್ರುವರಿ 2021, 10:23 IST
Last Updated 4 ಫೆಬ್ರುವರಿ 2021, 10:23 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 5,196 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ್ದ ಲಾಭಕ್ಕೆ ಹೋಲಿಸಿದರೆ ಇದು ಸರಿಸುಮಾರು ಶೇಕಡ 7ರಷ್ಟು ಕಡಿಮೆ. ಹಿಂದಿನ ವರ್ಷದ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ಬ್ಯಾಂಕ್‌ 5,583 ಕೋಟಿ ಲಾಭ ಗಳಿಸಿತ್ತು.

2020ರ ಡಿಸೆಂಬರ್‌ ತ್ರೈಮಾಸಿಕದ ಒಟ್ಟು ಆದಾಯದಲ್ಲಿ ಕೂಡ ಇಳಿಕೆ ಆಗಿದ್ದು, ಬ್ಯಾಂಕ್ ಒಟ್ಟು ₹ 75,980 ಕೋಟಿ ಆದಾಯ ಸಂಗ್ರಹಿಸಿದೆ. 2019ರ ಡಿಸೆಂಬರ್ ತ್ರೈಮಾಸಿಕದ ಆದಾಯವು ₹ 76,797 ಕೋಟಿ ಆಗಿತ್ತು.

ಬ್ಯಾಂಕ್‌ನ ಆಸ್ತಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಒಟ್ಟು ಎನ್‌ಪಿಎ ಪ್ರಮಾಣವು ಶೇ 4.77ಕ್ಕೆ ತಗ್ಗಿದೆ. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ಇದು ಶೇ 6.94 ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.