ADVERTISEMENT

ಸಾಲದ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

ಪಿಟಿಐ
Published 15 ಆಗಸ್ಟ್ 2022, 21:33 IST
Last Updated 15 ಆಗಸ್ಟ್ 2022, 21:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.5ರವರೆಗೆ ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿದರಗಳು ಸೋಮವಾರದಿಂದಲೇ ಅನ್ವಯ ಆಗಲಿವೆ.

ಎಸ್‌ಬಿಐ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ಆಧಾರಿತ ಸಾಲದ ದರ (ಇಬಿಎಲ್ಆರ್‌) ಶೇ 7.55 ರಿಂದ ಶೇ 8.05ಕ್ಕೆ ಏರಿಕೆ ಆಗಿದೆ. ರೆಪೊ ಆಧಾರಿತ ಸಾಲದ ದರ (ಆರ್‌ಎಲ್‌ಎಲ್‌ಆರ್‌) ಶೇ 7.15 ರಿಂದ 7.65ಕ್ಕೆ ಏರಿಕೆ ಆಗಿದೆ.

ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಆಧಾರಿತ ಸಾಲದ ದರವನ್ನು (ಎಂಸಿಎಲ್‌ಆರ್‌) ಶೇ 0.20ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್‌ ಶೇ 7.50 ರಿಂದ ಶೇ 7.70ಕ್ಕೆ ಏರಿಕೆ ಆಗಿದೆ.

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ಆಗಸ್ಟ್‌ 5ರಂದು ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಳ ಮಾಡಿರುವುದಕ್ಕೆ ಅನುಗುಣವಾಗಿ ಎಸ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.