
ಪ್ರಜಾವಾಣಿ ವಾರ್ತೆ
ನವದೆಹಲಿ : ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಖಾಸಗಿ ವಲಯದ ಯೆಸ್ ಬ್ಯಾಂಕ್‌ನಲ್ಲಿ ಹೊಂದಿದ್ದ ಷೇರುಗಳ ಪೈಕಿ ಶೇ 13.18ರಷ್ಟನ್ನು ಜಪಾನಿನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್‌ಗೆ (ಎಸ್‌ಎಂಬಿಸಿ) ಮಾರಾಟ ಮಾಡಿದೆ.
ಈ ಷೇರುಗಳ ಮಾರಾಟಕ್ಕೆ ಪ್ರತಿಯಾಗಿ ₹8,888 ಕೋಟಿಯನ್ನು ಎಸ್‌ಎಂಬಿಸಿಯಿಂದ ಪಡೆಯಲಾಗಿದ್ದು, ಷೇರು ವಿಕ್ರಯ ಪೂರ್ಣಗೊಂಡಿದೆ ಎಂದು ಎಸ್‌ಬಿಐ ಬುಧವಾರ ಷೇರುಪೇಟೆಗೆ ತಿಳಿಸಿದೆ.
ಷೇರು ಮಾರಾಟದ ಬಳಿಕವೂ ಯೆಸ್ ಬ್ಯಾಂಕ್‌ನಲ್ಲಿ ಎಸ್‌ಬಿಐನ ಷೇರಿನ ಪಾಲು ಶೇ 10.8ರಷ್ಟಿದೆ. ಈ ಷೇರು ವಿಕ್ರಯವು ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅತಿದೊಡ್ಡ ಮೊತ್ತದ ಗಡಿಯಾಚೆಗಿನ ವಹಿವಾಟಾಗಿದೆ.
ಈ ವಹಿವಾಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಒಪ್ಪಿಗೆ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.