ADVERTISEMENT

ಎಲ್‌ಆ್ಯಂಡ್‌ಟಿ ಷೇರು ಮರುಖರೀದಿಗೆ ‘ಸೆಬಿ’ ನಕಾರ

ಪಿಟಿಐ
Published 19 ಜನವರಿ 2019, 16:06 IST
Last Updated 19 ಜನವರಿ 2019, 16:06 IST
   

ನವದೆಹಲಿ: ₹ 9 ಸಾವಿರ ಕೋಟಿ ಮೊತ್ತದ ಷೇರು ಮರುಖರೀದಿ ಕೊಡುಗೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ನೀಡಲು ನಿರಾಕರಿಸಿದೆ ಎಂದು ಎಂಜಿನಿಯರಿಂಗ್‌ ಕಂಪನಿ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ಆ್ಯಂಡ್‌ಟಿ) ಕಂಪನಿ ಹೇಳಿದೆ.

ಷೇರು ಮರುಖರೀದಿಗೆ ಕೊಡುಗೆಯುಕಂಪನಿ ಕಾಯ್ದೆ ಮತ್ತು ಸೆಬಿ ನಿಯಮಗಳಿಗೆ ಅನುಗುಣವಾಗಿ ಇಲ್ಲ. ಹೀಗಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕಂಪನಿಗೆ ಬರೆದಿರುವ ಪತ್ರದಲ್ಲಿ ‘ಸೆಬಿ’ ತಿಳಿಸಿದೆ.

ಷೇರುದಾರರಿಂದ ಪ್ರತಿ ಷೇರಿಗೆ ₹ 1,475ರಂತೆ ಒಟ್ಟಾರೆ 6.1 ಕೋಟಿ ಷೇರುಗಳನ್ನು ಖರೀದಿಸಲು ಕಂಪನಿ ಉದ್ದೇಶಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.