ADVERTISEMENT

ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌: ನಾಮಿನಿ ಪ್ರಕ್ರಿಯೆ ಗಡುವು ವಿಸ್ತರಣೆ

ಪಿಟಿಐ
Published 27 ಡಿಸೆಂಬರ್ 2023, 15:27 IST
Last Updated 27 ಡಿಸೆಂಬರ್ 2023, 15:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಯಲ್ಲಿ ನಾಮಿನಿ ಪ್ರಕ್ರಿಯೆ ಪೂರ್ಣಗೊಳಿಸುವ ಗಡುವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) 2024ರ ಜೂನ್‌ 30ರ ವರೆಗೆ ವಿಸ್ತರಿಸಿದೆ.

ಈ ಪ್ರಕ್ರಿಯೆ ಪೂರ್ಣಗೊಳಿಸಲು ಡಿಸೆಂಬರ್ 31ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ನಾಮಿನಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಯು ನಿಷ್ಕ್ರಿಯಗೊಳ್ಳಲಿದೆ. ನಾಮಿನಿ ಸೇರ್ಪಡೆಗೊಳಿಸಿದ ಬಳಿಕ ಮತ್ತೆ ಖಾತೆಗಳು ಸಕ್ರಿಯಗೊಳ್ಳಲಿವೆ ಎಂದು ಹೇಳಿತ್ತು.

ADVERTISEMENT

ಷೇರು ಮಾರುಕಟ್ಟೆಯ ಪಾಲುದಾರರು ಹಾಗೂ ಹೂಡಿಕೆದಾರರ ಮನವಿ ಮೇರೆಗೆ, ಅವರಿಗೆ ಅನುಕೂಲ ಕಲ್ಪಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಸೆಬಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.