ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ)2018–19ನೇ ಹಣಕಾಸು ವರ್ಷದಲ್ಲಿ ₹ 963 ಕೋಟಿ ವರಮಾನ ಗಳಿಸಿದೆ.
2017–18ರಲ್ಲಿದ್ದ ₹ 855 ಕೋಟಿ ವರಮಾನಕ್ಕೆ ಹೋಲಿಸಿದರೆ ಶೇ 13ರಷ್ಟು ಏರಿಕೆಯಾಗಿದೆ.
ಒಟ್ಟಾರೆ ವೆಚ್ಚವು 2019ರ ಮಾರ್ಚ್ 31ರ ಅಂತ್ಯಕ್ಕೆ ₹ 414 ಕೋಟಿಗಳಿಂದ ₹ 492 ಕೋಟಿಗಳಿಗೆ ಏರಿಕೆಯಾಗಿದೆ.ಆಡಳಿತಾತ್ಮಕ ವೆಚ್ಚವು ₹ 121 ಕೋಟಿಗಳಿಂದ ₹ 131 ಕೋಟಿಗಳಿಗೆ ಹೆಚ್ಚಾಗಿದೆ.
ನಿಯಂತ್ರಣ ಶುಲ್ಕ ₹ 624 ಕೋಟಿಗಳಿಂದ ₹ 750 ಕೋಟಿಗಳಿಗೆ ಹಾಗೂ ಇತರೆ ವರಮಾನ ₹ 10 ಕೋಟಿಗಳಿಂದ ₹ 17 ಕೋಟಿಗಳಿಗೆ ಏರಿಕೆ ಕಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.