ADVERTISEMENT

ಆ.16ರಿಂದ ನಕಲಿ ಜಿಎಸ್‌ಟಿ ನೋಂದಣಿ ವಿರುದ್ಧ ಕಾರ್ಯಾಚರಣೆ

ಪಿಟಿಐ
Published 13 ಆಗಸ್ಟ್ 2024, 14:23 IST
Last Updated 13 ಆಗಸ್ಟ್ 2024, 14:23 IST
<div class="paragraphs"><p>ಸಾಂಧರ್ಭಿಕ ಚಿತ್ರ</p></div>

ಸಾಂಧರ್ಭಿಕ ಚಿತ್ರ

   

ನವದೆಹಲಿ: ದೇಶದಾದ್ಯಂತ ಆಗಸ್ಟ್ 16ರಿಂದ ಅಕ್ಟೋಬರ್‌ 15ರ ವರೆಗೆ ಜಿಎಸ್‌ಟಿ ಅಧಿಕಾರಿಗಳು ನಕಲಿ ಕಂಪನಿಗಳ ನೋಂದಣಿ ವಿರುದ್ಧ ಎರಡನೇ ಹಂತದ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ತಿಳಿಸಿದೆ.

ಕಳೆದ ವರ್ಷದ ಮೇ ತಿಂಗಳಿನಲ್ಲಿ ನಡೆದ ಮೊದಲ ಹಂತದ ಕಾರ್ಯಾಚರಣೆಯಲ್ಲಿ 22 ಸಾವಿರ ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿತ್ತು. ಒಟ್ಟು ₹24 ಸಾವಿರ ಕೋಟಿ ವಂಚನೆ ಬೆಳಕಿಗೆ ಬಂದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಸಮನ್ವಯ ಸಮಿತಿಯಿಂದ ಈ ಕಾರ್ಯಾಚರಣೆ ನಡೆಯಲಿದೆ.

ADVERTISEMENT

ಜಿಎಸ್‌ಟಿ ಅಡಿ ವರ್ತಕರಿಗೆ ಗುರುತಿನ ಸಂಖ್ಯೆ (ಜಿಎಸ್‌ಟಿಐಎನ್) ನೀಡಲಾಗುತ್ತದೆ. ನಕಲಿ ಜಿಎಸ್‌ಟಿಐಎನ್‌ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಕಂಪನಿಗಳು ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ ಪಡೆಯಲು ನಕಲಿ ಇನ್‌ವಾಯ್ಸ್‌ ಸಲ್ಲಿಸುತ್ತವೆ. ಈ ಬಗ್ಗೆ ತಪಾಸಣೆ ನಡೆಸಿ ತಪ್ಪಿತಸ್ಥರಿಂದ ತೆರಿಗೆ ವಸೂಲಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮಂಡಳಿಯು ತಿಳಿಸಿದೆ.

ನಕಲಿ ಜಿಎಸ್‌ಟಿಐಎನ್‌ ಸಲ್ಲಿಕೆಯ ಹಿಂದಿರುವ ಸೂತ್ರದಾರರನ್ನು ಪತ್ತೆ ಹಚ್ಚಬೇಕು. ಅವರಿಂದ ಬಾಕಿ ವಸೂಲಿ ಮಾಡಬೇಕು. ಬಾಕಿ ಪಾವತಿಸದಿದ್ದರೆ ಅವರ ಸ್ವತ್ತು ಮತ್ತು ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.