ADVERTISEMENT

ಎರಡನೇ ದಿನವೂ ಸೆನ್ಸೆಕ್ಸ್‌ ಏರಿಕೆ

ಪಿಟಿಐ
Published 7 ಜುಲೈ 2022, 15:26 IST
Last Updated 7 ಜುಲೈ 2022, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ಮುಂದುವರಿಯಿತು. ಗ್ರಾಹಕ ಬಳಕೆ, ಲೋಹ ಮತ್ತು ಬ್ಯಾಂಕ್‌ ಷೇರುಗಳ ಮೌಲ್ಯ ಹೆಚ್ಚಾಗಿದ್ದರಿಂದ ಗುರುವಾರ ಸೂಚ್ಯಂಕಗಳು ಏರಿಕೆ ಕಂಡುಕೊಂಡವು.

ರೂಪಾಯಿ ಮೌಲ್ಯ ಇಳಿಕೆ ಮತ್ತು ವಿದೇಶಿ ಬಂಡವಾಳ ಹೊರಹರಿವಿನ ಕಾರಣಗಳಿಂದಾಗಿ ಸೂಚ್ಯಂಕಗಳ ಗಳಿಕೆ ಇನ್ನೂ ಹೆಚ್ಚಿನ ಮಟ್ಟ ತಲುಪಲು ಸಾಧ್ಯವಾಗಲಿಲ್ಲ ಎಂದು ವರ್ತಕರು ತಿಳಿಸಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 327 ಅಂಶ ಹೆಚ್ಚಾಗಿ 54,178 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 143 ಅಂಶ ಹೆಚ್ಚಾಗಿ 16,133 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ಕಂಪನಿಯ ವಹಿವಾಟು ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಮೂರು ಪಟ್ಟು ಹೆಚ್ಚಳ ಆಗಿದೆ ಎಂಬ ವರದಿಯ ಬಳಿಕ ಟಾಟಾ ಸಮೂಹಕ್ಕೆ ಸೇರಿದ ಟೈಟಾನ್ ಕಂಪನಿಯ ಷೇರು ಮೌಲ್ಯ ಸೆನ್ಸೆಕ್ಸ್‌ನಲ್ಲಿ ಶೇ 5.69ರಷ್ಟು ಗರಿಷ್ಠ ಏರಿಕೆ ಕಂಡಿತು.

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಚಲನೆ ಕೂಡ ದೇಶಿ ಷೇರುಪೇಟೆಗಳ ಗಳಿಕೆಗೆ ಕಾರಣವಾಗಿದೆ ಎಂದು ರೆಲಿಗೇರ್‌ ಬ್ರೋಕಿಂಗ್‌ ಲಿಮಿಟೆಡ್‌ನ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್ ಶೇ 1.30ರಷ್ಟು ಮತ್ತು ಮಿಡ್‌ಕ್ಯಾಪ್‌ ಶೇ 1.19ರಷ್ಟು ಏರಿಕೆ ಕಂಡವು. ಬಿಎಸ್‌ಇನಲ್ಲಿ ಲೋಹ ವಲಯವು ಶೇ 4.49ರಷ್ಟು ಗರಿಷ್ಠ ಏರಿಕೆ ಕಂಡಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.05ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 100.7 ಡಾಲರ್‌ಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.