ADVERTISEMENT

5ನೇ ದಿನವೂ ಷೇರುಪೇಟೆ ಕುಸಿತ

ಪಿಟಿಐ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST

ಮುಂಬೈ : ‘ಕೋವಿಡ್‌–19’ ಪ್ರಭಾವಕ್ಕೆ ಸಿಲುಕಿದೇಶದ ಷೇರುಪೇಟೆಗಳು ಸತತ ಐದನೇ ದಿನವೂ ಕುಸಿತ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ದಿನದ ವಹಿವಾಟಿನಲ್ಲಿ 466 ಅಂಶಗಳವರೆಗೂ ಕುಸಿತ ಕಂಡಿತ್ತು. ನಂತರ ವಹಿವಾಟು ತುಸು ಚೇತರಿಕೆ ಕಂಡಿದ್ದರಿಂದ143 ಅಂಶ ಇಳಿಕೆಯೊಂದಿಗೆ 39,746 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 45 ಅಂಶ ಇಳಿಕೆಕಂಡು 11,634ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಸರ್ಕಾರಿ ಬಾಂಡ್‌ಗಳ ಫೆಬ್ರುವರಿ ತಿಂಗಳ ವಾಯಿದಾ ವಹಿವಾಟು ಗುರುವಾರ ಮುಕ್ತಾಯವಾಗಿರುವುದು ಸಹ ಚಂಚಲ ವಹಿವಾಟಿಗೆ ಕಾರಣವಾಯಿತು. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 4.5ರಷ್ಟರುವ ಅಂದಾಜು ಮಾಡಿರುವುದು ಸಹ ನಕಾರಾತ್ಮಕ ಚಲನೆಯನ್ನು ಹೆಚ್ಚಿಸಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಿದೇಶಿ ಬಂಡವಾಳ ಹೊರಹರಿವು: ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ವಾರದ ವಹಿವಾಟಿನಲ್ಲಿ ಇದುವರೆಗೆ ₹ 6,812 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಹಿವಾಟಿನ ವಿವರ

₹ 6.1 ಲಕ್ಷ ಕೋಟಿ - ನಾಲ್ಕು ದಿನಗಳಲ್ಲಿ ಕರಗಿರುವ ಸಂಪತ್ತು

1,424 ಅಂಶ - 5 ದಿನಗಳಲ್ಲಿ ಬಿಎಸ್‌ಇ ಇಳಿಕೆ

447 ಅಂಶ - 5 ದಿನಗಳಲ್ಲಿ ನಿಫ್ಟಿ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.