ADVERTISEMENT

ಮಾರಾಟದ ಒತ್ತಡ: ಸೂಚ್ಯಂಕ ಇಳಿಕೆ

ಪಿಟಿಐ
Published 13 ಜುಲೈ 2022, 13:27 IST
Last Updated 13 ಜುಲೈ 2022, 13:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತೈಲ, ಅನಿಲ, ಬ್ಯಾಂಕಿಂಗ್‌ ಮತ್ತು ಐ.ಟಿ. ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ದೇಶದ ಷೇರುಪೇಟೆಗಳು ಬುಧವಾರ ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 372 ಅಂಶ ಇಳಿಕೆ ಕಂಡು 53,514 ಅಂಶಗಳಿಗೆ ತಲುಪಿತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 91 ಅಂಶ ಇಳಿಕೆಯಾಗಿ 15,966 ಅಂಶಗಳಿಗೆ ತಲುಪಿತು.

ಏಷ್ಯಾದ ಮಾರುಕಟ್ಟೆಗಳ ಗಳಿಕೆಯ ಪ್ರಭಾವದಲ್ಲಿ ಸೆನ್ಸೆಕ್ಸ್‌ 54,211 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಆದರೆ, ಯುರೋಪ್‌ ಮಾರುಕಟ್ಟೆಗಳ ವಹಿವಾಟು ಇಳಿಕೆ ಕಂಡಿದ್ದರಿಂದ ಸೆನ್ಸೆಕ್ಸ್‌ ನಕಾರಾತ್ಮಕ ಹಾದಿಗೆ ಹೊರಳಿತು.

ADVERTISEMENT

‘ಮಾರುಕಟ್ಟೆಯು ಒತ್ತಡದಲ್ಲಿ ವಹಿವಾಟು ನಡೆಸಿತು. ಶೇಕಡ 0.50ಕ್ಕೂ ಹೆಚ್ಚಿನ ನಷ್ಟ ಕಂಡಿತು’ ಎಂದು ರೆಲಿಗೇರ್‌ ಬ್ರೋಕಿಂಗ್‌ ಲಿಮಿಟೆಡ್‌ನ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 1ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 100.5 ಡಾಲರ್‌ಗೆ ತಲುಪಿತು.

ವಹಿವಾಟಿನ ವಿವರ

967 ಅಂಶ

ಮೂರು ವಹಿವಾಟು ಅವಧಿಯಲ್ಲಿ ಸೆನ್ಸೆಕ್ಸ್‌ ಇಳಿಕೆ

254

ಮೂರು ವಹಿವಾಟು ಅವಧಿಯಲ್ಲಿ ನಿಫ್ಟಿ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.