ADVERTISEMENT

ಸೆನ್ಸೆಕ್ಸ್‌ 1,240 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 16:08 IST
Last Updated 29 ಜನವರಿ 2024, 16:08 IST
ಮುಂಬೈ ಷೇರುಪೇಟೆ 
ಮುಂಬೈ ಷೇರುಪೇಟೆ    

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳ ಖರೀದಿ ಭರಾಟೆಯಿಂದಾಗಿ ಸೋಮವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇ 2ರಷ್ಟು ಏರಿಕೆ ಕಂಡಿವೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹6 ಲಕ್ಷ ಕೋಟಿ ಹೆಚ್ಚಳವಾಗಿದೆ. 

ಸೆನ್ಸೆಕ್ಸ್‌ 1,240 ಅಂಶ (ಶೇ 1.76) ಏರಿಕೆಯಾಗಿ 71,941ಕ್ಕೆ ಅಂತ್ಯಗೊಂಡಿತು. ನಿಫ್ಟಿ 385 ಅಂಶ (ಶೇ 1.80) ಹೆಚ್ಚಳವಾಗಿ 21,737ರಲ್ಲಿ ವಹಿವಾಟು ಕೊನೆಗೊಂಡಿತು.

ಟಾಟಾ ಮೋಟರ್ಸ್‌, ಪವರ್‌ ಗ್ರಿಡ್‌, ಲಾರ್ಸೆನ್‌ ಆ್ಯಂಡ್‌ ಟೊರ್ಬೊ, ಕೋಟಕ್‌ ಮಹೀಂದ್ರ ಬ್ಯಾಂಕ್‌, ಎನ್‌ಟಿಪಿಸಿ, ಟೈಟನ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಪ್ರಮುಖ ಗಳಿಕೆ ಕಂಡಿವೆ.

ADVERTISEMENT

ಐಟಿಸಿ, ಇನ್ಫೊಸಿಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಟೆಕ್‌ ಮಹೀಂದ್ರ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ ಇಳಿಕೆ ಕಂಡಿವೆ.  

ಏಷ್ಯನ್‌ ಮಾರುಕಟ್ಟೆಯಲ್ಲಿ, ಸಿಯೋಲ್‌, ಟೋಕಿಯೊ ಮತ್ತು ಹಾಂಗ್‌ಕಾಂಗ್‌ ಗಳಿಕೆ ಕಂಡರೆ, ಶಾಂಘೈ ಇಳಿಕೆ ಕಂಡಿತು. 

ರಿಲಯನ್ಸ್‌ ಬಂಡವಾಳ ಏರಿಕೆ:

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಮೌಲ್ಯ ಶೇ 7ರಷ್ಟು ಏರಿಕೆಯಾಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹19.56 ಲಕ್ಷ ಕೋಟಿ ದಾಟಿದೆ.

ಬಿಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 6.81ರಷ್ಟು ಹೆಚ್ಚಾಗಿದೆ. ಪ್ರತಿ ಷೇರಿನ ಬೆಲೆ  ₹2,895 ಇದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಶೇ 7.16ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿನ ಬೆಲೆ ₹2,900 ಇದೆ. 

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.