ADVERTISEMENT

ಸೆನ್ಸೆಕ್ಸ್ 635 ಅಂಶ ಚೇತರಿಕೆ

ಪಿಟಿಐ
Published 27 ಅಕ್ಟೋಬರ್ 2023, 15:41 IST
Last Updated 27 ಅಕ್ಟೋಬರ್ 2023, 15:41 IST
ಸೂಚ್ಯಂಕ 117 ಅಂಶ ಚೇತರಿಕೆ
ಸೂಚ್ಯಂಕ 117 ಅಂಶ ಚೇತರಿಕೆ   

ಮುಂಬೈ (ಪಿಟಿಐ): ಸತತ ಆರು ದಿನಗಳ ನಕಾರಾತ್ಮಕ ವಹಿವಾಟಿನಿಂದ ದೇಶದ ಷೇರುಪೇಟೆಗಳು ಶುಕ್ರವಾರ ಹೊರಬಂದವು. ವಾಹನ, ಐ.ಟಿ. ಹಣಕಾಸು ಮತ್ತು ಇಂಧನ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಿದರು. ಇದರಿಂದಾಗಿ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಶೇ 1ಕ್ಕೂ ಹೆಚ್ಚು ಏರಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 635 ಅಂಶ ಏರಿಕೆ ಕಂಡು 63,783 ಅಂಶಗಳಿಗೆ ತಲುಪಿತು. ಹೂಡಿಕೆದಾರರ ಸಂಪತ್ತು ₹4.41 ಲಕ್ಷ ಕೋಟಿಯಷ್ಟು ಹೆಚ್ಚಾಗಿ, ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯವು ₹310.45 ಲಕ್ಷ ಕೋಟಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 190 ಅಂಶ ಹೆಚ್ಚಾಗಿ 19,047 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ADVERTISEMENT

ಅಮೆರಿಕದ ಮೂರನೇ ತ್ರೈಮಾಸಿಕದ ಜಿಡಿಪಿ ಅಂಕಿ–ಅಂಶವು ಶೇ 4.9ರಷ್ಟು ಆಗಿದ್ದು, ಎರಡು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದು ಮಾರುಕಟ್ಟೆ ನಿರೀಕ್ಷೆಗಿಂತಲೂ (ಶೇ 4.2) ಉತ್ತಮವಾಗಿದೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ಚಲನೆ ನಡೆಯಿತು. ಆ ಮೂಲಕ ದೇಶಿ ಷೇರುಪೇಟೆಗಳಲ್ಲಿಯೂ ಸೂಚ್ಯಂಕಗಳು ಚೇತರಿಕೆ ಕಂಡುಕೊಂಡವು ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್ ಸರ್ವಿಸಸ್‌ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್ ಷೇರು ಶೇ 1.75ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹2,265ಕ್ಕೆ ಏರಿಕೆ ಕಂಡಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 3.50ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 90.13 ಡಾಲರ್‌ಗೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.