ADVERTISEMENT

ಮತ್ತೆ 58 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಪಿಟಿಐ
Published 1 ಆಗಸ್ಟ್ 2022, 11:50 IST
Last Updated 1 ಆಗಸ್ಟ್ 2022, 11:50 IST

ಮುಂಬೈ: ಸತತ ನಾಲ್ಕನೆಯ ದಿನವೂ ಏರಿಕೆ ದಾಖಲಿಸಿರುವ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತೆ 58 ಸಾವಿರ ಅಂಶಗಳ ಗಡಿಯನ್ನು ದಾಟಿದೆ. ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟು ಹಾಗೂ ವಿದೇಶಿ ಬಂಡವಾಳದ ಒಳಹರಿವು ಸೂಚ್ಯಂಕದ ಏರಿಕೆಗೆ ಕಾರಣ.

ಹೂಡಿಕೆದಾರರು ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು ಕೂಡ ಸೂಚ್ಯಂಕದ ಜಿಗಿತಕ್ಕೆ ಕಾರಣವಾಯಿತು ಎಂದು ವರ್ತಕರು ತಿಳಿಸಿದ್ದಾರೆ. ಬಿಎಸ್‌ಇ ಸೆನ್ಸೆಕ್ಸ್ ಸೋಮವಾರ ಒಟ್ಟು 545 ಅಂಶ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 181 ಅಂಶ ಏರಿಕೆ ಕಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 1.35ರಷ್ಟು ಕಡಿಮೆ ಆಗಿದ್ದು, ಪ್ರತಿ ಬ್ಯಾರೆಲ್‌ಗೆ 101.6 ಅಮೆರಿಕನ್ ಡಾಲರ್‌ಗೆ ತಲುಪಿದೆ.

ADVERTISEMENT

‘ಒಂಭತ್ತು ತಿಂಗಳುಗಳಿಂದ ಷೇರುಗಳ ಮಾರಾಟಕ್ಕೆ ಗಮನ ನೀಡಿದ್ದ ವಿದೇಶಿ ಹೂಡಿಕೆದಾರರು ಜುಲೈ ತಿಂಗಳಲ್ಲಿ ಖರೀದಿಗೆ ಆದ್ಯತೆ ನೀಡಿದ್ದಾರೆ. ಇದು ಬಹಳ ದೊಡ್ಡ ಧನಾತ್ಮಕ ವಿಚಾರ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.