ADVERTISEMENT

ಷೇರುಪೇಟೆ ಸೂಚ್ಯಂಕ 99 ಅಂಶ ಏರಿಕೆ

ಪಿಟಿಐ
Published 13 ಜುಲೈ 2020, 12:42 IST
Last Updated 13 ಜುಲೈ 2020, 12:42 IST
-
-   

ಮುಂಬೈ: ಪ್ರಮುಖ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಷೇರುಗಳ ಬೆಲೆ ಏರಿಕೆ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರ 99 ಅಂಶಗಳ ಚೇತರಿಕೆ ಕಂಡಿತು.

ದಿನದ ವಹಿವಾಟಿನಲ್ಲಿ 430 ಅಂಶಗಳವರೆಗೆ ಹೆಚ್ಚಳ ಕಂಡಿದ್ದ ಸೂಚ್ಯಂಕವು ವಹಿವಾಟಿನ ಅಂತ್ಯಕ್ಕೆ ಗಳಿಕೆಯ ಬಹುಭಾಗವನ್ನು ಕಳೆದುಕೊಂಡೂ 99 ಅಂಶಗಳ ಹೆಚ್ಚಳದಿಂದ 36,693.69 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆಯ ‘ನಿಫ್ಟಿ’ 34.65 ಅಂಶ ಹೆಚ್ಚಾಗಿ 10,802 ಅಂಶಗಳಿಗೆ ತಲುಪಿತು.

ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ಭಾರ್ತಿ ಏರ್‌ಟೆಲ್‌, ಇನ್ಫೊಸಿಸ್‌, ಎಚ್‌ಯುಎಲ್‌ ಮತ್ತು ಐಟಿಸಿ ಷೇರುಗಳು ಲಾಭ ಮಾಡಿಕೊಂಡವು.

ADVERTISEMENT

ತನ್ನ ವಾಹನ ಹಣಕಾಸು ಅಂಗಸಂಸ್ಥೆಯಲ್ಲಿ ಹಿತಾಸಕ್ತಿ ಸಂಘರ್ಷ ಮತ್ತು ಸಾಲ ನೀಡಿಕೆಯಲ್ಲಿ ನಿಯಮಗಳನ್ನು ಪಾಲನೆ ಮಾಡದಿರುವ ಕುರಿತು ಎಚ್‌ಡಿಎಫ್‌ಸಿ ಬ್ಯಾಂಕ್‌ ತನಿಖೆ ನಡೆಸಿರುವುದಾಗಿ ವರದಿಯಾಗಿರುವುದು ಅದರ ಷೇರುಗಳ ಬೆಲೆ ಶೇ 2ರಷ್ಟು ಕುಸಿಯುವಂತೆ ಮಾಡಿತು.

ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ ಮತ್ತು ಸೋಲ್‌ ಷೇರುಪೇಟೆಗಳಲ್ಲಿ ಖರೀದಿ ಆಸಕ್ತಿ ಕಂಡು ಬಂದಿತ್ತು. ಇದು ದೇಶಿ ಷೇರುಪೇಟೆಗಳಲ್ಲಿಯೂ ಪ್ರತಿಫಲನಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.