ADVERTISEMENT

ಸತತ ಎರಡನೇ ದಿನವೂ ವಹಿವಾಟು ಇಳಿಕೆ

ಪಿಟಿಐ
Published 3 ನವೆಂಬರ್ 2021, 14:34 IST
Last Updated 3 ನವೆಂಬರ್ 2021, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶಿ ಷೇರುಪೇಟೆಗಳ ವಹಿವಾಟು ಸತತ ಎರಡನೇ ದಿನವೂ ನಕಾರಾತ್ಮಕವಾಗಿ ಅಂತ್ಯಗೊಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಸಭೆಯ ನಿರ್ಧಾರಗಳು ಹೊರಬೀಳಬೇಕಿರುವುದರಿಂದ ಹೂಡಿಕೆದಾರರು ಬಂಡವಾಳ ತೊಡಗಿಸಲು ಮುಂದಾಗಲಿಲ್ಲ. ಇದರಿಂದಾಗಿ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಾಣುವಂತಾಯಿತು ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 258 ಅಂಶ ಇಳಿಕೆ ಕಂಡು 59,771 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 59 ಅಂಶ ಇಳಿಕೆಯಾಗಿ 17,829 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಫೆಡರಲ್ ರಿಸರ್ವ್ ತನ್ನ ಆಸ್ತಿ ಖರೀದಿ ಕಾರ್ಯಕ್ರಮ ಮೊಟಕುಗೊಳಿಸುವ ನಿರೀಕ್ಷೆ ಇದ್ದು, ಬಡ್ಡಿದರ ಹಿಮ್ಮುಖಗೊಳಿಸುವ ಕುರಿತು ಯಾವುದೇ ಸುಳಿವು ನೀಡದೇ ಇರುವುದು ಹೂಡಿಕೆದಾರರನ್ನು ವಹಿವಾಟಿನಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ADVERTISEMENT

ಹಿಂದೂ ಸಂವತ್ಸರ 2077ರಲ್ಲಿ ಸೆನ್ಸೆಕ್ಸ್‌ 16,133 ಅಂಶ ಮತ್ತು ನಿಫ್ಟಿ 5,048 ಅಂಶಗಳಷ್ಟು ಏರಿಕೆ ಕಂಡಿವೆ. 2078ನೇ ಸಂವತ್ಸರದ ಆರಂಭದ ಸಲುವಾಗಿ ಗುರುವಾರ ಒಂದು ಗಂಟೆಗಳ ಅವಧಿಯ ಮುಹೂರ್ತದ ವಹಿವಾಟು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.