ADVERTISEMENT

ಸೂಚ್ಯಂಕದ ಓಟಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:02 IST
Last Updated 3 ಏಪ್ರಿಲ್ 2019, 19:02 IST

ಮುಂಬೈ: ದೇಶದ ಷೇರುಪೇಟೆಗಳಲ್ಲಿ ನಾಲ್ಕು ದಿನಗಳ ಸೂಚ್ಯಂಕದ ಓಟಕ್ಕೆ ಬುಧವಾರ ತಡೆ ಬಿದ್ದಿದೆ.

ಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಸ್ಕೈಮೆಟ್‌ ಸಂಸ್ಥೆ ಹೇಳಿದೆ. ಇದರಿಂದ ಷೇರುಪೇಟೆಗಳಲ್ಲಿಲಾಭಗಳಿಕೆ ಉದ್ದೇಶದ ವಹಿವಾಟು ನಡೆದು ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 450 ಅಂಶಗಳಷ್ಟು ಏರಿಳಿತ ಕಂಡು ಅಂತಿಮವಾಗಿ 179 ಅಂಶಗಳ ಗಳಿಕೆಯೊಂದಿಗೆ 38,877 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 70 ಅಂಶ ಇಳಿಕೆಯಾಗಿ 11,643 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಆರ್‌ಬಿಐ, 2019–20ನೇ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಪರಾಮರ್ಶೆಯ ವರದಿಯನ್ನು ಗುರುವಾರ ಪ್ರಕಟಿಸಲಿದೆ.

ಅಮೆರಿಕ–ಚೀನಾ ವಾಣಿಜ್ಯ ಮಾತುಕತೆಯುಜಾಗತಿಕ ಮಾರುಕಟ್ಟೆಗಳನ್ನು ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.