ADVERTISEMENT

ಉಕ್ರೇನ್–ರಷ್ಯಾ ಸಂಘರ್ಷದ ಪರಿಣಾಮ: ಕುಸಿದ ದೇಶೀಯ ಷೇರುಪೇಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2022, 4:38 IST
Last Updated 7 ಮಾರ್ಚ್ 2022, 4:38 IST
ಪಿಟಿಐ ಸಂಗ್ರಹ ಚಿತ್ರ
ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮ ದೇಶೀಯ ಷೇರುಪೇಟೆ ಮತ್ತೆ ಕುಸಿತ ಕಂಡಿದೆ.

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 1,400 ಅಂಕಗಳಿಗಿಂತ ಹೆಚ್ಚು ಕುಸಿದಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯ ನಡುವೆ ಜಾಗತಿಕ ಮಾರುಕಟ್ಟೆಗಳ ವಹಿವಾಟು ದುರ್ಬಲವಾಗಿರವುದರ ಪರಿಣಾಮ ಭಾರತದ ಷೇರುಪೇಟೆಯೂ ಕುಸಿಯುತ್ತಿದೆ.

ಸೆನ್ಸೆಕ್ಸ್ 1,459.28 ಅಂಶಗಳಷ್ಟು ಕುಸಿದು, 52,874.53 ವಹಿವಾಟು ಆರಂಭಿಸಿತು. ನಿಫ್ಟಿ 420.50 ಅಂಶಗಳಷ್ಟು ಕುಸಿದು 15,824.85ರಲ್ಲಿ ವಹಿವಾಟು ಆರಂಭಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.