ADVERTISEMENT

ಐ.ಟಿ., ಹಣಕಾಸು ಮತ್ತು ಎಫ್‌ಎಂಸಿಜಿ ಷೇರುಗಳ ಲಾಭ ಗಳಿಕೆಗೆ ಇಳಿದ ಸೂಚ್ಯಂಕ

ಪಿಟಿಐ
Published 6 ಜನವರಿ 2021, 16:03 IST
Last Updated 6 ಜನವರಿ 2021, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳ 10 ದಿನಗಳ ಗಳಿಕೆಯ ಓಟಕ್ಕೆ ಬುಧವಾರ ತಡೆ ಬಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌, ಐ.ಟಿ., ಹಣಕಾಸು ಮತ್ತು ಎಫ್‌ಎಂಸಿಜಿ ಷೇರುಗಳು ಲಾಭ ಗಳಿಕೆಗೆ ಒಳಗಾದ ಪರಿಣಾಮವಾಗಿ ಸೂಚ್ಯಂಕಗಳು ಇಳಿಕೆ ಕಂಡವು.

ರೂಪಾಯಿ ಮೌಲ್ಯ ವೃದ್ಧಿ ಮತ್ತು ವಿದೇಶಿ ಬಂಡವಾಳದ ಒಳಹರಿವು ಸೂಚ್ಯಂಕವು ಇನ್ನಷ್ಟು ಇಳಿಯುವುದನ್ನು ತಡೆದಿವೆ ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 264 ಅಂಶ ಇಳಿಕೆಯಾಗಿ 48,174 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 54 ಅಂಶ ಇಳಿಕೆ ಕಂಡು 14,146ಕ್ಕೆ ತಲುಪಿತು. ಐಟಿಸಿ ಷೇರು ಶೇ 2.86ರಷ್ಟು ಗರಿಷ್ಠ ನಷ್ಟ ಕಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.