ADVERTISEMENT

ಮುಂದುವರಿದ ಗೂಳಿ ಓಟ

ರಿಲಯನ್ಸ್‌ ಇಂಡಸ್ಟ್ರಿಸ್‌, ಎಚ್‌ಡಿಎಫ್‌ಸಿ ಷೇರು ಗಳಿಕೆ

ಪಿಟಿಐ
Published 24 ಡಿಸೆಂಬರ್ 2020, 13:48 IST
Last Updated 24 ಡಿಸೆಂಬರ್ 2020, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಗೂಳಿ ಓಟು ಮುಂದುವರಿದಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಮತ್ತು ಹಣಕಾಸು ವಲಯದ ಷೇರುಗಳ ಉತ್ತಮ ಗಳಿಕೆ ಹಾಗೂ ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಬೆಳವಣಿಗೆಯಿಂದ ಗುರುವಾರ ಸೂಚ್ಯಂಕಗಳು ಏರಿಕೆ ಕಂಡಿವೆ.

ರೂಪಾಯಿ ಮೌಲ್ಯ ವೃದ್ಧಿ ಹಾಗೂ ವಿದೇಶಿ ಬಂಡವಾಳ ಒಳಹರಿವು ಸಹ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿವೆ ಎಂದು ವರ್ತಕರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 529 ಅಂಶ ಜಿಗಿತ ಕಂಡು 46,973 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 166 ಅಂಶ ಹೆಚ್ಚಾಗಿ 13,767 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಆ್ಯಕ್ಸಿಸ್ ಬ್ಯಾಂಕ್ ಷೇರು ಶೇ 3.04ರಷ್ಟು ಗರಿಷ್ಠ ಗಳಿಕೆ ಕಂಡಿತು. ಸನ್‌ ಫಾರ್ಮಾ, ಒಎನ್‌ಜಿಸಿ, ಆರ್‌ಐಎಲ್‌, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಬಜಾಜ್‌ ಫೈನಾನ್ಸ್‌ ಮತ್ತು ಕೋಟಕ್‌ ಬ್ಯಾಂಕ್‌ ಷೇರುಗಳ ಬೆಲೆಯೂ ಹೆಚ್ಚಾಗಿದೆ.

ವಲಯವಾರು ಬಿಎಸ್‌ಇ ಇಂಧನ, ಬ್ಯಾಂಕಿಂಗ್‌, ಹಣಕಾಸು, ತೈಲ ಮತ್ತು ಅನಿಲ ಹಾಗೂ ದೂರಸಂಪರ್ಕ ವಲಯಗಳ ಸೂಚ್ಯಂಕಗಳು ಶೇ 2.20ರವರೆಗೂ ಏರಿಕೆ ಕಂಡವು. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ ಶೇ 0.59ರವರೆಗೆ ಏರಿಕೆ ಕಂಡಿವೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಸತತ ಎರಡನೇ ದಿನವೂ ಏರಿಕೆ ಕಂಡಿತು. ಗುರುವಾರ ಒಂದು ಡಾಲರ್‌ಗೆ 21 ಪೈಸೆ ಹೆಚ್ಚಾಗಿ ₹ 73.55ರಂತೆ ವಿನಿಮಯಗೊಂಡಿತು.

ದೇಶಿ ಷೇರುಪೇಟೆಗಳ ಸಕಾರಾತ್ಮಕ ಚಲನೆ ಹಾಗೂ ವಿದೇಶಿ ಬಂಡವಾಳ ಒಳಹರಿವಿನಿಂದಾಗಿ ರೂಪಾಯಿ ಮೌಲ್ಯ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.