ADVERTISEMENT

ಸೇವಾ ವಲಯದ ರಫ್ತು ₹ 19 ಲಕ್ಷ ಕೋಟಿಗೆ ಏರಿಕೆ: ವಾಣಿಜ್ಯ ಸಚಿವಾಲಯ ಮಾಹಿತಿ

ಪಿಟಿಐ
Published 4 ಮೇ 2022, 13:55 IST
Last Updated 4 ಮೇ 2022, 13:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ರಫ್ತು ವಹಿವಾಟಿನ ಮೌಲ್ಯವು 2021–22ರಲ್ಲಿ ದಾಖಲೆಯ ₹ 19 ಲಕ್ಷ ಕೋಟಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

2019–20ರಲ್ಲಿ ಸೇವಾ ವಲಯದ ರಫ್ತು ವಹಿವಾಟು ಮೌಲ್ಯವು ₹ 16.18 ಲಕ್ಷ ಕೋಟಿ ಆಗಿತ್ತು ಎಂದು ತಿಳಿಸಿದೆ.

ಮಾರ್ಚ್‌ನಲ್ಲಿ ಸೇವೆಗಳ ರಫ್ತು ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 2.04 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದೂ ಹೇಳಿದೆ. ದೂರಸಂಪರ್ಕ, ಕಂಪ್ಯೂಟರ್‌ ಮತ್ತು ಮಾಹಿತಿ ಸೇವೆಗಳು ಮತ್ತು ಇತರೆ ವಾಣಿಜ್ಯ ಸೇವೆಗಳು ರಫ್ತು ಹೆಚ್ಚಳಕ್ಕೆ ಕೊಡುಗೆ ನೀಡಿವೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.