ADVERTISEMENT

ಎಸ್‌ಐಪಿ‌ ಮೂಲಕ ಹೂಡಿಕೆ ಇಳಿಕೆ

ಪಿಟಿಐ
Published 14 ಅಕ್ಟೋಬರ್ 2020, 2:14 IST
Last Updated 14 ಅಕ್ಟೋಬರ್ 2020, 2:14 IST

ನವದೆಹಲಿ: ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಯು ಸತತ ಆರನೇ ತಿಂಗಳಿನಲ್ಲಿಯೂ ಇಳಿಮುಖವಾಗಿಯೇ ಇದೆ.

2020ರ ಸೆಪ್ಟೆಂಬರ್‌ನಲ್ಲಿ ₹ 7,788 ಕೋಟಿ ಹೂಡಿಕೆ ಆಗಿದೆ. 2018ರ ಸೆಪ್ಟೆಂಬರ್‌ನಲ್ಲಿ ₹ 7,727 ಕೋಟಿ ಹೂಡಿಕೆ ಆಗಿತ್ತು. ‘ಹೂಡಿಕೆದಾರರ ಆದಾಯ ಸ್ಥಿರವಾಗುತ್ತಿದ್ದಂತೆಯೇ ಮತ್ತೆ ಒಳಹರಿವು ಕಂಡುಬರಲಿದೆ’ ಎಂದು ಪ್ರೈಮ್‌ ಇನ್‌ವೆಸ್ಟರ್ಸ್‌ ಡಾಟ್‌ ಇನ್‌ನ ಸಹ ಸ್ಥಾಪಕಿ ವಿದ್ಯಾ ಬಾಲಾ ಹೇಳಿದ್ದಾರೆ. ‘ಲಾಕ್‌ಡೌನ್‌ನಿಂದಾಗಿ ಬಹಳಷ್ಟು ರಿಟೇಲ್‌ ಹೂಡಿಕೆದಾರರು ಎಸ್‌ಐಪಿ ಮೂಲಕ ಮಾಡುವ ಹೂಡಿಕೆಯನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ’ ಎಂದೂ ತಿಳಿಸಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಉದ್ಯೋಗ ಮತ್ತು ಉದ್ದಿಮೆಯ ಬಗ್ಗೆ ಅನಿಶ್ಚಿತ ಸ್ಥಿತಿ ಉಂಟಾಗಿದೆ. ಹೀಗಾಗಿ ಹೂಡಿಕೆದಾರರು ತಮ್ಮ ಬಳಿ ಸ್ವಲ್ಪ ಹಣ ಇಟ್ಟುಕೊಳ್ಳಲು ಬಯಸಿದ್ದಾರೆ. ಇದರಿಂದಾಗಿಯೇ ಎಸ್‌ಐಪಿ ಮೂಲಕ ಹೂಡಿಕೆ ಇಳಿಕೆಯಾಗುತ್ತಿದೆ’ ಎನ್ನುತ್ತಾರೆ ಮೈವೆಲ್ತ್‌ ಗ್ರೋತ್‌ ಡಾಟ್‌ ಕಾಂನ ಹರ್ಷದ್‌ ಚೇತನ್‌ವಾಲಾ.

ADVERTISEMENT

ಸದ್ಯ, ಮ್ಯೂಚುವಲ್‌ ಫಂಡ್‌ಗಳಲ್ಲಿ 3.34 ಕೋಟಿ ಎಸ್‌ಐಪಿ ಖಾತೆಗಳಿವೆ. ಮ್ಯೂಚುವಲ್ ಫಂಡ್‌ ಉದ್ದಿಮೆಗೆ ಆಗಸ್ಟ್‌ನಲ್ಲಿ 4.5 ಲಕ್ಷ ಹೊಸ ಖಾತೆಗಳು ಸೇರ್ಪಡೆ ಆಗಿದ್ದವು. ಸೆಪ್ಟೆಂಬರ್‌ನಲ್ಲಿ 7.37 ಲಕ್ಷ ಹೊಸ ಖಾತೆಗಳು ಸೇರ್ಪಡೆಗೊಂಡಿವೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.