ADVERTISEMENT

ಜಿಡಿಪಿ ಇಳಿಕೆ ತಾತ್ಕಾಲಿಕ: ಮೂಡಿಸ್

ಪಿಟಿಐ
Published 7 ಮಾರ್ಚ್ 2023, 14:09 IST
Last Updated 7 ಮಾರ್ಚ್ 2023, 14:09 IST

ನವದೆಹಲಿ (ಪಿಟಿಐ): ಹಿಂದಿನ ವರ್ಷದ ಕೊನೆಯಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದಿರುವ ಮಂದಗತಿಯು ತಾತ್ಕಾಲಿಕ ಎಂದು ಮೂಡಿಸ್‌ ಅನಾಲಿಟಿಕ್ಸ್ ಮಂಗಳವಾರ ಹೇಳಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಶೇಕಡ 4.4ಕ್ಕೆ ಇಳಿಕೆಯಾಗಿರುವುದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ತೋರಿಸಿವೆ.

‘ವರ್ಷದ ಮಧ್ಯ ಭಾಗದಲ್ಲಿ ಅಮೆರಿಕ ಹಾಗೂ ಯುರೋಪಿನಲ್ಲಿ ಚೇತರಿಕೆಯು ಕಾಣಿಸಿಕೊಳ್ಳಲಿದೆ. ಇದು ಭಾರತದಲ್ಲಿ ಬೆಳವಣಿಗೆಗೆ ನೆರವಾಗಲಿದೆ’ ಎಂದು ಮೂಡಿಸ್ ಅನಾಲಿಟಿಕ್ಸ್ ಅಂದಾಜಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.