ADVERTISEMENT

ಸ್ವಾವಲಂಬನೆ: ರಾಜ್ಯ ಸೌರಶಕ್ತಿ ತಯಾರಕರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:13 IST
Last Updated 26 ಜೂನ್ 2020, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಇದುವರೆಗೆ ಆಮದನ್ನೇ ಹೆಚ್ಚಾಗಿ ಅವಲಂಬಿಸಿದ್ದ ರಾಜ್ಯದಲ್ಲಿನ ಸೌರಶಕ್ತಿ ಉಪಕರಣಗಳ ತಯಾರಕರು, ಬಿಡಿಭಾಗಗಳನ್ನು ಸ್ಥಳೀಯವಾಗಿಯೇ ತಯಾರಿಸುವುದರ ಕಡೆಗೆ ಗಮನ ನೀಡಲು ನಿರ್ಧರಿಸಿದ್ದಾರೆ.

ಸೌರಶಕ್ತಿಯ ಗಾಜಿನ ಫಲಕಗಳ ತಯಾರಿಕೆಯಲ್ಲಿ ಬಳಕೆಯಾಗುವ ಗರಿಷ್ಠ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗಾಜಿನ ಕೊಳವೆಗಳ ತಯಾರಿಕಾ ಘಟಕವನ್ನು ದೇಶದಲ್ಲಿಯೇ ಸ್ಥಾಪಿಸುವುದಕ್ಕೆ ಗಮನ ನೀಡಲು ತೀರ್ಮಾನಿಸಿದ್ದಾರೆ. ಬಿಡಿಭಾಗಗಳಿಗಾಗಿ ಚೀನಾ ಸೇರಿದಂತೆ ಏಷ್ಯಾದ ಇತರ ದೇಶಗಳ ಮೇಲಿನ ಅವಲಂಬನೆ ತಗ್ಗಿಸಿ ಸ್ವಾವಲಂಬನೆಯತ್ತ ಸಾಗಲು ಸೌರಶಕ್ತಿ ಉಪಕರಣಗಳ ತಯಾರಕರ ಸಂಘವು (ಕೆಎಎಸ್‌ಎಂಎ) ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ ಮತ್ತು ಭಾರತದಲ್ಲಿಯೇ ತಯಾರಿಸಿ ಆಶಯ ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ಕ್ರಮ ಕೈಗೊಂಡಿದೆ.

ADVERTISEMENT

ಬೆಂಗಳೂರಿನಲ್ಲಿ ನಡೆದ ಸಂಘದ ಸಭೆಯಲ್ಲಿ ಸುಪ್ರೀಂ ಸೋಲಾರ್‌, ನ್ಯೂಟೆಕ್‌ ಸೋಲಾರ್‌, ಸನ್‌ರೈಸ್‌ ಸೋಲಾರ್‌, ಸನ್‌ಜೋನ್‌ ಸಿಸ್ಟಮ್ಸ್‌, ಸನ್‌ವ್ಯೂ ಸೋಲಾರ್‌, ಸೋಲಾರ್‌ ಹೈಟೆಕ್‌, ಹೆಲಿಅಸ್ ಸೋಲಾರ್‌ನ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.