ADVERTISEMENT

ಸೋನು ಸೂದ್‌ ಸನ್‌ಪ್ಯೂರ್‌ ಬ್ರ್ಯಾಂಡ್ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:16 IST
Last Updated 26 ಆಗಸ್ಟ್ 2021, 9:16 IST
ಸನ್‌ಪ್ಯೂರ್
ಸನ್‌ಪ್ಯೂರ್   

ಬೆಂಗಳೂರು: ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರನ್ನು ತನ್ನ ಬ್ರ್ಯಾಂಡ್‌ ರಾಯಭಾರಿ ಆಗಿ ನೇಮಿಸಿರುವುದಾಗಿ ಅಡುಗೆ ಎಣ್ಣೆಯ ಬ್ರ್ಯಾಂಡ್‌ ಆಗಿರುವ ಸನ್‌ಪ್ಯೂರ್ ಹೇಳಿದೆ.

‘ಸೋನು ಸೂದ್ ತಮ್ಮ ನಿಸ್ವಾರ್ಥ ಸೇವೆಯ ಕಾರಣಕ್ಕೆ ಈಗ ಸನ್‌ಪ್ಯೂರ್‌ನ ವಿಶ್ವಾಸಾರ್ಹ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ಅವರ ಬದ್ಧತೆಯಿಂದ ಧನಾತ್ಮಕ ಬದಲಾವಣೆ ಮತ್ತು ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಕಂಪನಿಯು ಪ್ರಕಟಣೆಯಲ್ಲಿ ಹೇಳಿದೆ.

‘ಸೋನು ಸೂದ್ ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ನಮಗೆ ಗೌರವ ತಂದಿದೆ ಹಾಗೂ ಖುಷಿ ನೀಡಿದೆ. ಜನರಿಂದ ಏನನ್ನೂ ನಿರೀಕ್ಷಿಸದೆ,ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿದ ಅವರ ಬದ್ಧತೆ ನಮ್ಮ ಬ್ರ್ಯಾಂಡ್‌ ಅನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ’ ಎಂದು ಸನ್‌ಪ್ಯೂರ್‌ನ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಮನ್ನನ್ ಖಾನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.