ADVERTISEMENT

ಸೌತ್‌ ಇಂಡಿಯನ್ ಬ್ಯಾಂಕ್‌: ಮಹಿಳಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 15:54 IST
Last Updated 14 ಮಾರ್ಚ್ 2025, 15:54 IST
‌ಸೌತ್ ಇಂಡಿಯನ್‌ ಬ್ಯಾಂಕ್‌ನ ನಿರ್ದೇಶಕಿ ಲಕ್ಷ್ಮಿ ರಾಮಕೃಷ್ಣ ಶ್ರೀನಿವಾಸ್ ಅವರು, ‘ವುಮೆನ್ ಲೈಕ್ ಯು’ ಪುಸ್ತಕವನ್ನು ಬಿಡುಗಡೆಗೊಳಿಸಿದರು
‌ಸೌತ್ ಇಂಡಿಯನ್‌ ಬ್ಯಾಂಕ್‌ನ ನಿರ್ದೇಶಕಿ ಲಕ್ಷ್ಮಿ ರಾಮಕೃಷ್ಣ ಶ್ರೀನಿವಾಸ್ ಅವರು, ‘ವುಮೆನ್ ಲೈಕ್ ಯು’ ಪುಸ್ತಕವನ್ನು ಬಿಡುಗಡೆಗೊಳಿಸಿದರು   

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸೌತ್‌ ಇಂಡಿಯನ್ ಬ್ಯಾಂಕ್‌ನಿಂದ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಇದೇ ವೇಳೆ ಬ್ಯಾಂಕ್‌ನ ನಿರ್ದೇಶಕಿ ಲಕ್ಷ್ಮಿ ರಾಮಕೃಷ್ಣ ಶ್ರೀನಿವಾಸ್ ಅವರು, ‘ವುಮೆನ್ ಲೈಕ್ ಯು’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಈ ಪುಸ್ತಕದಲ್ಲಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 52 ಮಹಿಳೆಯರ ಸ್ಫೂರ್ತಿದಾಯಕ ಪಯಣದ ಬಗ್ಗೆ ವಿವರಿಸಲಾಗಿದೆ. ಪ್ರತಿ ಮಹಿಳೆಯರಿಗೂ ಅವರ ಕಥೆಗಳು ಪ್ರೇರಣೆ ನೀಡಲಿವೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ಪ್ಯಾರಾಲಿಂಪಿಕ್ಸ್‌ ಅಥ್ಲೀಟ್ ಮಾಲತಿ ಹೊಳ್ಳ ಅಧ್ಯಕ್ಷತೆವಹಿಸಿದ್ದರು. ತಮ್ಮ ಸಾಧನೆಯ ಬಗ್ಗೆ ಅವರು ಅನುಭವ ಹಂಚಿಕೊಂಡರು. ನಿರೂಪಕಿ ಮಧು ಮೈಲಂಕೋಡಿ ಚರ್ಚೆಯ ಉಸ್ತುವಾರಿ ನಿರ್ವಹಿಸಿದರು.

ತತ್ವಮಸಿ ಸ್ಥಾಪಕಿ ಶ್ರೀದೇವಿ ರಾಘವನ್, ಟಾಟಾ ಸೋಲ್‌ಫುಲ್ ಸಹ ಸಂಸ್ಥಾಪಕಿ ರಸಿಕಾ ಅಯ್ಯರ್, ಪೀಕ್ ಆಲ್ಫಾ ಇನ್ವೆಸ್ಟ್‌ಮೆಂಟ್ಸ್ ಸಹ ಸಂಸ್ಥಾಪಕಿ ಪ್ರಿಯಾ ಸುಂದರ್, ಡೆಂಟ್ಸು ಇಂಡಿಯಾದ ಮುಖ್ಯ ಅಧಿಕಾರಿ ಸಿಮಿ ಸಭಾನೆ ಪಾಲ್ಗೊಂಡಿದ್ದರು. ಸ್ಯಾಕ್ಸೋಫೋನ್ ವಾದಕಿ ಸುಬ್ಬಲಕ್ಷ್ಮಿ ನಡೆಸಿಕೊಟ್ಟ ಸಂಗೀತ ಗಾಯನ ಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.