ADVERTISEMENT

ಷೇರುಪೇಟೆ: ದೀಪಾವಳಿ ಹಬ್ಬದ ಪ್ರಯುಕ್ತ ಮುಹೂರ್ತ ವಹಿವಾಟು

ಪಿಟಿಐ
Published 20 ಅಕ್ಟೋಬರ್ 2025, 16:08 IST
Last Updated 20 ಅಕ್ಟೋಬರ್ 2025, 16:08 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ಮಂಗಳವಾರ ಮಧ್ಯಾಹ್ನ 1.45ರಿಂದ 2.45ರವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಮುಹೂರ್ತ ವಹಿವಾಟು ನಡೆಯಲಿದೆ.

ಮುಹೂರ್ತ ವಹಿವಾಟು ಹೊರತುಪಡಿಸಿದರೆ ಮಂಗಳವಾರ ಎಂದಿನ ವಹಿವಾಟು ಇರುವುದಿಲ್ಲ. ಬುಧವಾರ ಬಲಿಪಾಡ್ಯಮಿ ಅಂಗವಾಗಿ ಮಾರುಕಟ್ಟೆಗೆ ರಜೆ ಇರಲಿದೆ. 

ಶುಭಪ್ರದವಾಗಿರುವ ಮುಹೂರ್ತ ವಹಿವಾಟಿನಲ್ಲಿ ತೊಡಗುವುದರಿಂದ ಸಮೃದ್ಧಿ ಮತ್ತು ಹಣಕಾಸಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.