ADVERTISEMENT

ದೇಶಿ ಕಾರ್ಯಾಚರಣೆ ವಿಸ್ತರಣೆಗೆ 66 ಹೊಸ ವಿಮಾನ: ಸ್ಪೈಸ್‌ಜೆಟ್

ಪಿಟಿಐ
Published 13 ಮಾರ್ಚ್ 2021, 20:55 IST
Last Updated 13 ಮಾರ್ಚ್ 2021, 20:55 IST
   

ಮುಂಬೈ: ಸ್ಪೈಸ್‌ ಜೆಟ್‌ ಕಂಪನಿಯು ತನ್ನ ದೇಶಿ ಕಾರ್ಯಾಚರಣೆಯನ್ನು ವಿಸ್ತರಿಸಲು ಉದ್ದೇಶಿಸಿದೆ. ಇದೇ ತಿಂಗಳ 28ರಿಂದ ಕೆಲವು ಮಾರ್ಗಗಳಲ್ಲಿ ಹೆಚ್ಚುವರಿ ಸೇವೆಗಳನ್ನೂ ಒಳಗೊಂಡು ಹೊಸ 66 ವಿಮಾನಗಳು ಹಾರಾಟ ಆರಂಭಿಸಲಿವೆ ಎಂದು ತಿಳಿಸಿದೆ.

ಮಹಾನಗರ ಮತ್ತು ಮಹಾನಗರೇಯತರ ಭಾಗಗಳಲ್ಲಿ ಈ ಹೊಸ ವಿಮಾನಗಳು ಸೇವೆ ಆರಂಭಿಸಲಿವೆ ಈ ಮೂಲಕ ಸ್ಥಳೀಯ ಸಂಪರ್ಕ ವಿಸ್ತರಣೆಯ ನಮ್ಮ ಬದ್ಧತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸಿಸಿಒ ಶಿಲ್ಪಾ ಭಾಟಿಯಾ ತಿಳಿಸಿದ್ದಾರೆ.

ಉಡಾನ್‌ ಯೋಜನೆಯಡಿ ಸ್ಪೈಸ್‌ಜೆಟ್‌ ಕಂಪನಿಯು ಸಣ್ಣ ನಗರಗಳ ಪ್ರಯಾಣ ಬೇಡಿಕೆಯನ್ನು ಈಡೇರಿಸುತ್ತಿದೆ. ಅಹಮದಾಬಾದ್‌–ದರ್ಭಂಗ್–ಅಹಮದಾಬಾದ್‌, ಹೈದರಾಬಾದ್‌–ದರ್ಭಂಗ್–ಹೈದರಾಬಾದ್‌, ಪುಣೆ–ದರ್ಭಂಗ್‌–ಪುಣೆ, ಕೋಲ್ಕತ್ತ–ದರ್ಭಂಗ್‌–ಕೋಲ್ಕತ್ತ ಮಾರ್ಗಗಳಲ್ಲಿ ಹೊಸ ವಿಮಾನಗಳು ಸೇವೆ ಕಾರ್ಯಾಚರಿಸಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.