ADVERTISEMENT

ಎಫ್‌ಸಿಐನಿಂದ ಅಕ್ಕಿ ನೇರ ಖರೀದಿಗೆ ರಾಜ್ಯಗಳಿಗೆ ಅವಕಾಶ: ಪ್ರಲ್ಹಾದ ಜೋಶಿ

ಪಿಟಿಐ
Published 1 ಆಗಸ್ಟ್ 2024, 15:13 IST
Last Updated 1 ಆಗಸ್ಟ್ 2024, 15:13 IST
ಪ್ರಲ್ಹಾದ ಜೋಶಿ –ಪಿಟಿಐ ಚಿತ್ರ
ಪ್ರಲ್ಹಾದ ಜೋಶಿ –ಪಿಟಿಐ ಚಿತ್ರ   

ನವದೆಹಲಿ: ರಾಜ್ಯಗಳು ಜನಕಲ್ಯಾಣ ಕಾರ್ಯಕ್ರಮಗಳಿಗೆ ಇ–ಟೆಂಡರ್‌ ಬದಲಾಗಿ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ನೇರವಾಗಿ ಅಕ್ಕಿ ಖರೀದಿಸಬಹುದಾಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ಕ್ವಿಂಟಲ್‌ಗೆ ₹2,800 ದರ ನಿಗದಿಪಡಿಸಲಾಗಿದೆ. ಆದರೆ, ಯಾವುದೇ ರಾಜ್ಯಗಳಿಂದ ಬೇಡಿಕೆ ಬಂದಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ಮುಂಗಾರು ಮಳೆಯ ಕೊರತೆಯಿಂದಾಗಿ ಅಕ್ಕಿ ಉತ್ಪಾದನೆಯಲ್ಲಿ ಇಳಿಕೆಯಾಗಿತ್ತು. ಹಾಗಾಗಿ, ಯಾವುದೇ ರಾಜ್ಯಗಳಿಗೆ ಕೇಂದ್ರವು ಅಕ್ಕಿ ಪೂರೈಸಲಿಲ್ಲ. ಕರ್ನಾಟಕವು ತನ್ನ ಜನಕಲ್ಯಾಣ ಕಾರ್ಯಕ್ರಮಗಳಿಗೆ ಅಕ್ಕಿ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಆದರೆ, ಪೂರೈಕೆ ಮಾಡಿರಲಿಲ್ಲ.

ADVERTISEMENT

‘ಭಾರತ್‌ ಬ್ರ್ಯಾಂಡ್‌ನಲ್ಲಿ ಗೋಧಿ ಹಿಟ್ಟು ಮತ್ತು ಅಕ್ಕಿ ಮಾರಾಟವನ್ನು ಜೂನ್‌ ಅಂತ್ಯದವರೆಗೆ ನಿಗದಿಪಡಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಮತ್ತೆ ಮಾರಾಟ ಆರಂಭಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.