ನವದೆಹಲಿ: ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ 2013ರಿಂದ ಇಲ್ಲಿಯವರೆಗೆ 5.97 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.
2013ರಿಂದ ಕಡು ಬಡವರಿಗೆ ಪಡಿತರ ವಿತರಿಸಲು ‘ಟಾರ್ಗೆಟೆಡ್ ಪಬ್ಲಿಕ್ ಡಿಸ್ಟ್ರುಬ್ಯುಷನ್ ಸಿಸ್ಟಂ’ (ಟಿಪಿಡಿಎಸ್) ಜಾರಿಗೊಂಡಿದೆ. ಇದರಡಿ ಡಿಜಿಟಲೀಕರಣ, ಆಧಾರ್ ಜೋಡಣೆ, ನಕಲಿ ಚೀಟಿಗಳ ಗುರುತಿಸುವಿಕೆ ಇತ್ಯಾದಿ ಮೂಲಕ ಇಷ್ಟು ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ರಾಜ್ಯ ಸಚಿವೆ ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (ಎನ್‌ಎಫ್‌ಎಸ್‌ಎ) ಈ ಯೋಜನೆ ಅನುಷ್ಠಾನಗೊಂಡಿದೆ. ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಜಂಟಿಯಾಗಿ ಜವಾಬ್ದಾರಿ ಹೊಂದಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.