ADVERTISEMENT

ಹೊಸ ಆರ್ಥಿಕ ವರ್ಷ: ಸೆನ್ಸೆಕ್ಸ್ ಸಂಭ್ರಮ

ಪಿಟಿಐ
Published 1 ಏಪ್ರಿಲ್ 2021, 16:44 IST
Last Updated 1 ಏಪ್ರಿಲ್ 2021, 16:44 IST
   

ಮುಂಬೈ: ಹೊಸ ಆರ್ಥಿಕ ವರ್ಷವನ್ನು ದೇಶಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಹುರುಪಿನಿಂದ ಸ್ವಾಗತಿಸಿದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 520 ಅಂಶ ಏರಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 176 ಅಂಶ ಏರಿಕೆ ದಾಖಲಿಸಿತು.

‘ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದ ಕಾರಣ ದೇಶಿ ಷೇರು ಮಾರುಕಟ್ಟೆಗಳು ಕೋವಿಡ್–19 ಪ್ರಕರಣಗಳ ಹೆಚ್ಚಳದ ಭೀತಿಯಿಂದ ಹೊರಬಂದವು. ಹಣಕಾಸು ಹಾಗೂ ಆಟೊಮೊಬೈಲ್‌ ವಲಯಗಳ ಷೇರುಗಳ ಖರೀದಿ ಜೋರಾಗಿತ್ತು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ವಿನೋದ್ ಮೋದಿ ಹೇಳಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡವು. ಕೇಂದ್ರ ಸರ್ಕಾರವು ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಒಟ್ಟು ₹ 14,500 ಕೋಟಿ ನೆರವು ನೀಡಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.