ಮುಂಬೈ : ಪ್ರತಿ ತಿಂಗಳು ₹50 ಸಾವಿರಕ್ಕಿಂತ ಕಡಿಮೆ ವೇತನ ಹೊಂದಿರುವವರಲ್ಲಿ ಶೇಕಡ 93ರಷ್ಟು ಮಂದಿ ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಕಡಿಮೆ ಆದಾಯ ಹೊಂದಿರುವ ವರ್ಗದ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ನೆಚ್ಚಿಕೊಳ್ಳುವುದು ಹೆಚ್ಚಾಗುತ್ತಿದೆ ಎಂಬುದನ್ನು ಇದು ಹೇಳುತ್ತಿದೆ.
ವೇತನ ಪಡೆಯುವ ಹಾಗೂ ಸ್ವಂತ ಉದ್ಯೋಗದಲ್ಲಿ ಇರುವ 20 ಸಾವಿರಕ್ಕೂ ಹೆಚ್ಚು ಜನರ ಒಂದು ವರ್ಷದ ಹಣಕಾಸಿನ ವಹಿವಾಟುಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಸ್ವಂತ ಉದ್ಯೋಗ ನಡೆಸುವವರ ಪೈಕಿ ಶೇ 85ರಷ್ಟು ಮಂದಿ ಕ್ರೆಡಿಟ್ ಕಾರ್ಡ್‌ಗಳನ್ನು ನೆಚ್ಚಿಕೊಂಡಿದ್ದಾರೆ ಎಂದು ವರದಿಯು ಹೇಳಿದೆ.
‘ಈಗ ಖರೀದಿಸಿ, ನಂತರ ಪಾವತಿಸಿ’ (ಬೈ ನೌ, ಪೇ ಲೇಟರ್ – ಬಿಎನ್‌ಪಿಎಲ್) ಹಣಕಾಸು ಸೇವೆಗಳ ಬಳಕೆ ಕೂಡ ದೊಡ್ಡ ಮಟ್ಟದಲ್ಲಿಯೇ ಇದೆ ಎಂಬುದನ್ನು ‘ಥಿಂಕ್360.ಎಐ’ ಹೆಸರಿನ ಫಿನ್‌ಟೆಕ್ ಸಂಸ್ಥೆ ನಡೆಸಿರುವ ಈ ಅಧ್ಯಯನ ವರದಿಯು ಹೇಳಿದೆ. ಸ್ವಂತ ಉದ್ಯೋಗ ನಡೆಸುವವರಲ್ಲಿ ಶೇ 18ರಷ್ಟು ಮಂದಿ, ನೌಕರರಲ್ಲಿ ಶೇ 15ರಷ್ಟು ಮಂದಿ ಈ ಸೇವೆ ಬಳಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.