ADVERTISEMENT

ಸಕ್ಕರೆ ಉತ್ಪಾದನೆಯಲ್ಲಿ ಶೇ18ರಷ್ಟು ಇಳಿಕೆ

ಪಿಟಿಐ
Published 17 ಏಪ್ರಿಲ್ 2025, 14:20 IST
Last Updated 17 ಏಪ್ರಿಲ್ 2025, 14:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್‌) ಇಲ್ಲಿಯವರೆಗೆ ಸಕ್ಕರೆ ಉತ್ಪಾದನೆಯಲ್ಲಿ ಶೇ 18ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್‌ಎಂಎ) ಗುರುವಾರ ತಿಳಿಸಿದೆ.

ದೇಶದ ಪ್ರಮುಖ ಸಕ್ಕರೆ ಉತ್ಪಾದನಾ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಉತ್ಪಾದನಾ ಪ್ರಮಾಣ ಇಳಿಕೆಯಾಗಿರುವುದೇ ಇದಕ್ಕೆ ಕಾರಣ ಎಂದು ವಿವರಿಸಿದೆ.

ಕಳೆದ ಮಾರುಕಟ್ಟೆ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಮೂರು ರಾಜ್ಯಗಳಿಂದ ಒಟ್ಟು 25.49 ದಶಲಕ್ಷ ಟನ್‌ನಷ್ಟು ಸಕ್ಕರೆ ಉತ್ಪಾದನೆ ಕಡಿಮೆಯಾಗಿದೆ ಎಂದು ಹೇಳಿದೆ. 

ADVERTISEMENT

ಕಳೆದ ವರ್ಷ ಕಬ್ಬಿನ ಹಾಲು ಹಾಗೂ ಮೊಲಾಸಿಸ್‌–ಬಿ (ಕಾಕಂಬಿ) ಬಳಸಿ ಎಥೆನಾಲ್‌ ತಯಾರಿಕೆಗೆ 21.5 ಲಕ್ಷ ಟನ್‌ ಸಕ್ಕರೆ ಬಳಕೆಯಾಗಿತ್ತು. ಈ ಬಾರಿ 35 ಲಕ್ಷ ಟನ್‌ ಬಳಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.