ನವದೆಹಲಿ: ಭಾರತವು ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವವರೆಗೆ ಜಾಗತಿಕ ಶಕ್ತಿಗಳು ಭಾರತವನ್ನು ಬೆದರಿಸುತ್ತಲೇ ಇರುತ್ತವೆ ಎಂದು ಎಟರ್ನಲ್ ಕಂಪನಿಯ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸುವ ಆದೇಶ ಹೊರಡಿಸಿದ ನಂತರ ಗೋಯಲ್ ಈ ಮಾತು ಆಡಿದ್ದಾರೆ. ‘ಬೆದರಿಕೆ’ ಹಾಗೂ ‘ಸುಂಕ’ದ ನಡುವೆ ಭಾರತವು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಲು ಸಾಮೂಹಿಕ ತೀರ್ಮಾನವೊಂದನ್ನು ಮಾಡಬೇಕು ಎಂದು ಗೋಯಲ್ ಅವರು ಎಕ್ಸ್ ವೇದಿಕೆಯಲ್ಲಿ ಬರೆದಿದ್ದಾರೆ.
‘ಜಗತ್ತು ನಮಗೆ ನಮ್ಮ ಸ್ಥಾನವನ್ನು ಕೆಲವು ವರ್ಷಗಳಿಗೆ ಒಮ್ಮೆ ನೆನಪು ಮಾಡಿಕೊಡುತ್ತದೆ. ಇಲ್ಲೊಂದು ಬೆದರಿಕೆ, ಅಲ್ಲೊಂದು ಸುಂಕ ಬರುತ್ತದೆ. ಆದರೆ ಬರುವ ಸಂದೇಶ ಒಂದೇ: ಭಾರತವು ತನ್ನ ಹಾದಿಯಲ್ಲಿ ಇರಬೇಕು. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವವರೆಗೆ ಜಗತ್ತಿನ ಶಕ್ತಿಗಳು ನಮ್ಮನ್ನು ಬೆದರಿಸುತ್ತಲೇ ಇರುತ್ತವೆ’ ಎಂದು ಅವರು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.