ಬೆಂಗಳೂರು: ಟಾಟಾ ಎಐಎ ಜೀವ ವಿಮೆ ಕಂಪನಿಯು ತನ್ನ ಎಲ್ಲ ಪಾಲಿಸಿದಾರರಿಗೆ ‘ಕೋವಿಡ್–19’ಗೆ ಸಂಬಂಧಿಸಿದಂತೆ ₹ 5 ಲಕ್ಷದ ಹೆಚ್ಚುವರಿ ಪ್ರಯೋಜನ ಕಲ್ಪಿಸಿದೆ.
ಇದಕ್ಕಾಗಿ ಪಾಲಿಸಿದಾರರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಪಾಲಿಸಿದಾರರು ‘ಕೋವಿಡ್–19’ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಈ ₹ 5 ಲಕ್ಷದ ಹೆಚ್ಚುವರಿ ವಿಮೆ ಪರಿಹಾರ ಒದಗಿಸಲಾಗುವುದು. ಈ ವರ್ಷದ ಜೂನ್ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿ ಇರಲಿದೆ.
ಕಂಪನಿಯ ಎಲ್ಲ ಸಕ್ರಿಯ ಏಜೆಂಟರ ಅವಲಂಬಿತರು ‘ಕೋವಿಡ್–19’ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚಕ್ಕೆ ₹ 25 ಸಾವಿರ ನೆರವು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.