ನವದೆಹಲಿ: ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಟಾಟಾ ಸಮೂಹ, ಗೂಗಲ್ ಇಂಡಿಯಾ ಮತ್ತು ಇನ್ಫೊಸಿಸ್ ಮೊದಲ ಮೂರು ಸ್ಥಾನಗಳಲ್ಲಿವೆ ಎಂದು ರ್‍ಯಾಂಡ್‌ಸ್ಟಡ್ ಎಂಪ್ಲಾಯರ್ ಬ್ರ್ಯಾಂಡ್ ರಿಸರ್ಚ್ ಹೇಳಿದೆ.
ಭಾರತದ ಉದ್ಯೋಗಿಗಳು ಕೆಲಸ ಮತ್ತು ವೈಯಕ್ತಿಕ ಬದುಕಿನ ನಡುವಿನ ಸಮತೋಲನಕ್ಕೆ, ಆಕರ್ಷಕ ವೇತನ ಹಾಗೂ ಇತರ ಸೌಲಭ್ಯಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ವರದಿ ಹೇಳಿದೆ.
2025ರಲ್ಲಿ ಅತ್ಯಂತ ಆಕರ್ಷಕವಾಗಿರುವ ಇತರ ಉದ್ಯೋಗದಾತ ಬ್ರ್ಯಾಂಡ್‌ಗಳೆಂದರೆ: ಸ್ಯಾಮ್ಸಂಗ್ ಇಂಡಿಯಾ, ಜೆಪಿ ಮಾರ್ಗನ್ ಚೇಸ್, ಐಬಿಎಂ, ವಿಪ್ರೊ, ರಿಲಯನ್ಸ್ ಇಂಡಸ್ಟ್ರೀಸ್, ಡೆಲ್ ಟೆಕ್ನಾಲಜೀಸ್ ಮತ್ತು ಎಸ್‌ಬಿಐ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.