ADVERTISEMENT

ಟಾಟಾ ಮೋಟರ್ಸ್‌: 6 ತಿಂಗಳ ‘ಇಎಂಐ’ ಮುಂದೂಡಿಕೆ ಕೊಡುಗೆ

ಪಿಟಿಐ
Published 8 ಜುಲೈ 2020, 14:20 IST
Last Updated 8 ಜುಲೈ 2020, 14:20 IST
ಆಲ್ಟ್ರೋಜ್
ಆಲ್ಟ್ರೋಜ್   

ನವದೆಹಲಿ: ಟಿಯಾಗೊ, ನೆಕ್ಸಾನ್ ಮತ್ತು ಆಲ್ಟ್ರೋಜ್‌ ಖರೀದಿಸುವ ಗ್ರಾಹಕರಿಗೆ ಆರು ತಿಂಗಳವರೆಗೆ ಇಎಂಐ ಮುಂದೂಡಿಕೆಯ ಯೋಜನೆಯನ್ನು ಟಾಟಾ ಮೋಟರ್ಸ್‌ ಪರಿಚಯಿಸಿದೆ.

ಯೋಜನೆಯಡಿ ಗ್ರಾಹಕರು ಯಾವುದೇ ಮುಂಗಡ ಹಣ ಪಾವತಿಸದೆ ಆರು ತಿಂಗಳ ‘ಇಎಂಐ’ಗಳನ್ನೂ ಮುಂದೂಡಿಕೆ ಮಾಡಬಹುದು. ಆದರೆ, ಈ ಅವಧಿಯಲ್ಲಿ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಐದು ವರ್ಷಗಳ ಅವಧಿಗೆ ಶೇ 100ರಷ್ಟು ಆನ್‌ರೋಡ್‌ ಸಾಲ ಸೌಲಭ್ಯವೂ ಸಿಗಲಿದೆ ಎಂದು ತಿಳಿಸಿದೆ.

ವೇತನ ವರ್ಗ ಮತ್ತು ಸ್ವ–ಉದ್ಯೋಗದಲ್ಲಿ ಇರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಕಂಪನಿಯು ಕರೂರ್‌ ವೈಶ್ಯ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ADVERTISEMENT

ತನ್ನ ವಿವಿಧ ಹಣಕಾಸು ಪಾಲುದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕೈಗೆಟುಕುವ, 8 ವರ್ಷಗಳ ದೀರ್ಘಾವಧಿಯ, ಆರಂಭದಲ್ಲಿ ಕಡಿಮೆ ಇಎಂಐ ಪಾವತಿಸಿ ಕ್ರಮೇಣ ಹೆಚ್ಚಾಗುವ ಕೊಡುಗೆಯೂ ಲಭ್ಯವಿದೆ ಎಂದೂ ಹೇಳಿದೆ.

ಅಂಕಿ–ಅಂಶ

14,571 -2020–21ರ ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಮಾರಾಟ

36,945 -2019–20ರ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.