ADVERTISEMENT

ಸೂರತ್‌ನಲ್ಲಿ ವಾಹನಗಳ ಗುಜರಿ ಕೇಂದ್ರ ಆರಂಭಿಸಿದ ಟಾಟಾ ಮೋಟಾರ್ಸ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 13:43 IST
Last Updated 23 ಸೆಪ್ಟೆಂಬರ್ 2023, 13:43 IST
   

ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ‘ನೋಂದಾಯಿತ ವಾಹನಗಳ ಗುಜರಿ ಸೌಲಭ್ಯ ಕೇಂದ್ರ’ವನ್ನು (ಆರ್‌ವಿಎಸ್‌ಎಫ್‌) ಗುಜರಾತ್‌ನ ಸೂರತ್‌ನಲ್ಲಿ ಆರಂಭಿಸಿದೆ. 

ಪ್ರತಿ ವರ್ಷವೂ 15 ಸಾವಿರ ವಾಹನಗಳನ್ನು ಬೇರ್ಪಡಿಸುವ ಸಾಮರ್ಥ್ಯವನ್ನು ಈ ಕೇಂದ್ರ ಹೊಂದಿದೆ. ಟಾಟಾ ಮೋಟರ್ಸ್‌ನ ಪಾಲುದಾರ ಶ್ರೀ ಅಂಬಿಕಾ ಆಟೊ ಕಂಪನಿಯು ಇದನ್ನು ನಿರ್ವಹಣೆ ಮಾಡಲಿದೆ. ಎಲ್ಲಾ ಬ್ರ್ಯಾಂಡ್‌ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಇಲ್ಲಿ ಗುಜರಿಗೆ ಹಾಕಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಆರಂಭಿಸಿರುವ ಮೂರನೇ ಕೇಂದ್ರ ಇದಾಗಿದೆ. ಜೈಪುರ ಮತ್ತು ಭುವನೇಶ್ವರದಲ್ಲಿ ಈಗಾಗಲೇ ತಲಾ ಒಂದು ಕೇಂದ್ರಗಳನ್ನು ಕಂಪನಿಯು ಈ ಹಿಂದೆಯೇ ಆರಂಭಿಸಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.