ADVERTISEMENT

ಉದ್ಯೋಗ ಕಡಿತ ಇಲ್ಲ: ಟಾಟಾ

ಪಿಟಿಐ
Published 15 ಡಿಸೆಂಬರ್ 2019, 20:05 IST
Last Updated 15 ಡಿಸೆಂಬರ್ 2019, 20:05 IST

ನವದೆಹಲಿ : ‘ಮಂದಗತಿಯ ಆರ್ಥಿಕತೆಯ ಕಾರಣಕ್ಕಾಗಿ ಉದ್ಯೋಗ ಕಡಿತ ಮಾಡುವ ಯಾವುದೇ ಯೋಚನೆ ಇಲ್ಲ’ ಎಂದು ಟಾಟಾ ಮೋಟರ್ಸ್‌ ಕಂಪನಿಯ ಸಿಇಒ ಗುಂಟೆರ್‌ ಬುಷೆಕ್‌ ಅವರು ತಿಳಿಸಿದ್ದಾರೆ.

‘12 ತಿಂಗಳುಗಳಿಂದ ಮಾರಾಟ ಕುಸಿತದ ಸಮಸ್ಯೆ ಎದುರಿಸುತ್ತಿದ್ದೇವೆ. ಹಾಗೊಂದು ವೇಳೆ ಉದ್ಯೋಗ ಕಡಿತ ಮಾಡುವುದಾಗಿದ್ದರೆ ಈಗಾಗಲೇ ಆಗಿರುತ್ತಿತ್ತು’ ಎಂದಿದ್ದಾರೆ.

‘ಕೆಲವೇ ತಿಂಗಳುಗಳಲ್ಲಿ ಹೊಸ ವಾಹನಗಳ ಬಿಡುಗಡೆ ಮಾಡಲಾಗುವುದು. ಹೀಗಾಗಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ’ ಎಂದೂ ಹೇಳಿದ್ದಾರೆ.

ADVERTISEMENT

ಕಂಪನಿಯು ಆಲ್ಟ್ರೋಸ್‌, ನೆಕ್ಸಾನ್‌ ಇವಿ ಮತ್ತು ಗ್ರಾವಿಟಾಸ್ ಇವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆ ನಡೆಸಿಕೊಂಡಿದೆ.

‘ವಾಣಿಜ್ಯ ವಾಹನವು ಕಂಪನಿಯ ವರಮಾನದ ಪ್ರಮುಖ ಮೂಲವಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಿಂದ ಹೊರಬರುವ ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ. ವಾಹನಗಳ ವಿಭಾಗಗಳಲ್ಲಿಯೂ ನಾವು ಇರುವುದರಿಂದ ಪರಿಸ್ಥಿತಿ ಎದುರಿಸುವುದು ಕಷ್ಟವೇನಲ್ಲ. ಮಾರುಕಟ್ಟೆ ವಿಸ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಕಡಿತದ ಅಗತ್ಯ ಇಲ್ಲ. ಆದರೆ, 30 ವರ್ಷಗಳ ವೃತ್ತಿ ಜೀವನದಲ್ಲಿ ಈ ಪ್ರಮಾಣದಲ್ಲಿ ಮಾರುಕಟ್ಟೆ ಚಂಚಲವಾಗಿದ್ದನ್ನು ಈ ಹಿಂದೆ ಯಾವತ್ತೂ ಕಂಡಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

44% -ಜುಲೈ–ಸೆಪ್ಟೆಂಬರ್‌ನಲ್ಲಿ ಮಾರಾಟದಲ್ಲಿ ಆಗಿರುವ ಇಳಿಕೆ

₹ 1,282 ಕೋಟಿ -ನಿವ್ವಳ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.