ADVERTISEMENT

ಟಾಟಾ ಮೋಟರ್ಸ್ ಲಾಭ ಶೇ 62ರಷ್ಟು ಇಳಿಕೆ

ಪಿಟಿಐ
Published 8 ಆಗಸ್ಟ್ 2025, 14:23 IST
Last Updated 8 ಆಗಸ್ಟ್ 2025, 14:23 IST
ಟಾಟಾ ಮೋಟರ್ಸ್
ಟಾಟಾ ಮೋಟರ್ಸ್   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್ ಲಿಮಿಟೆಡ್‌ನ ನಿವ್ವಳ ಲಾಭದಲ್ಲಿ ಶೇ 62ರಷ್ಟು ಇಳಿಕೆಯಾಗಿದೆ. 

ಕಳೆದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ₹10,587 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹4,003 ಕೋಟಿ ಲಾಭ ಗಳಿಸಿದೆ. ವಾಹನಗಳ ಮಾರಾಟದಲ್ಲಿನ ಇಳಿಕೆ ಲಾಭದ ಪ್ರಮಾಣ ಕಡಿಮೆಯಾಗಲು ಕಾರಣ ಎಂದು ಷೇರುಪೇಟೆಗೆ ಕಂಪನಿ ಶುಕ್ರವಾರ ತಿಳಿಸಿದೆ.

ವರಮಾನವು ₹1,04,407 ಕೋಟಿಯಾಗಿದೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ₹1,07,102 ಕೋಟಿಯಾಗಿತ್ತು ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.