ನವದೆಹಲಿ: ಅಂಗ ಸಂಸ್ಥೆಗಳ ವಹಿವಾಟೂ ಸೇರಿದಂತೆ ಟಾಟಾ ಮೋಟರ್ಸ್ ಕಂಪನಿಯ ಒಟ್ಟಾರೆ ನಿವ್ವಳ ಲಾಭವು 2019–20ರ ಮೂರನೇ ತ್ರೈಮಾಸಿಕದಲ್ಲಿ ₹ 1,756 ಕೋಟಿಗಳಷ್ಟಾಗಿದೆ.
ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹ 26,960 ಕೋಟಿಗಳಷ್ಟು ನಿವ್ವಳ ನಷ್ಟಕ್ಕೆ ಗುರಿಯಾಗಿತ್ತು.
ಒಟ್ಟಾರೆ ವರಮಾನವು ವರ್ಷದ ಹಿಂದಿನ ₹ 76,915 ಕೋಟಿಗೆ ಹೋಲಿಸಿದರೆ ಈ ಬಾರಿ ₹ 71,676 ಕೋಟಿಗಳಷ್ಟಾಗಿದೆ.
ಟಾಟಾ ಮೋಟರ್ಸ್ನ ವಹಿವಾಟನ್ನು ಮಾತ್ರ ಪರಿಗಣಿಸಿದರೆ ₹ 1,039 ಕೋಟಿ ನಷ್ಟ ಕಂಡಿದೆ. ವರ್ಷದ ಹಿಂದೆ ₹ 617.62 ಕೋಟಿ ಲಾಭ ಗಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.