ನವದೆಹಲಿ: ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್, ದಕ್ಷಿಣ ಆಫ್ರಿಕಾದ ಪ್ರಯಾಣಿಕ ವಾಹನ ಮಾರುಕಟ್ಟೆಯನ್ನು ಮತ್ತೆ ಪ್ರವೇಶಿಸಿದೆ.
ಹ್ಯಾರಿಯರ್, ಕರ್ವ್, ಪಂಚ್ ಮತ್ತು ಟಿಯಾಗೊ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.
‘ದಕ್ಷಿಣ ಆಫ್ರಿಕಾದ ವಾಹನ ಕಂಪನಿ ಮೋಟಸ್ ಹೋಲ್ಡಿಂಗ್ಸ್ ಪಾಲುದಾರಿಕೆಯೊಂದಿಗೆ ಮಾರುಕಟ್ಟೆಗೆ ಮತ್ತೆ ಪ್ರವೇಶಿಸಿದ್ದೇವೆ. ಈ ಮರುಪ್ರವೇಶ ಕಂಪನಿಯ ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಮಹತ್ವದ ಮೈಲಿಗಲ್ಲಾಗಿದೆ’ ಎಂದು ಟಾಟಾ ಮೋಟರ್ಸ್ ಪ್ರಯಾಣಿಕ ವಾಹನದ (ಟಿಎಂಪಿವಿ) ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.
ಪ್ರಸ್ತುತ ಟಿಎಂಪಿವಿ ರಾಷ್ಟ್ರವ್ಯಾಪಿ 40 ಡೀಲರ್‌ಶಿಪ್‌ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, 2026ರ ವೇಳೆಗೆ ಇದನ್ನು 60ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.