ADVERTISEMENT

ಟಾಟಾ ಮೋಟರ್ಸ್‌ ನಷ್ಟ ₹ 307 ಕೋಟಿ

ಪಿಟಿಐ
Published 27 ಅಕ್ಟೋಬರ್ 2020, 17:04 IST
Last Updated 27 ಅಕ್ಟೋಬರ್ 2020, 17:04 IST

ಮುಂಬೈ: ಟಾಟಾ ಮೋಟರ್ಸ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹ 307 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಸಹ ₹ 187.7 ಕೋಟಿ ನಷ್ಟ ಅನುಭವಿಸಿತ್ತು. ಕಂಪನಿಯ ಒಟ್ಟಾರೆ ವರಮಾನ ₹ 65,432 ಕೋಟಿಗಳಿಂದ ₹ 53,530 ಕೋಟಿಗಳಿಗೆ ಇಳಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.