ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು 2024ರ ಜನವರಿ 1ರಿಂದ ತನ್ನ ವಾಣಿಜ್ಯ ವಾಹನದ ಬೆಲೆಗಳನ್ನು ಶೇ 3ರಷ್ಟು ಹೆಚ್ಚಳ ಮಾಡುವುದಾಗಿ ಭಾನುವಾರ ತಿಳಿಸಿದೆ.
ತಯಾರಿಕಾ ವೆಚ್ಚದ ಹೆಚ್ಚಳ ಸೇರಿದಂತೆ ಹಲವು ಕಾರಣದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಎಲ್ಲ ಮಾದರಿಯ ವಾಣಿಜ್ಯ ವಾಹನಗಳಿಗೆ ಬೆಲೆ ಏರಿಕೆ ಅನ್ವಯಿಸಲಿದೆ ಎಂದು ಕಂಪನಿ ತಿಳಿಸಿದೆ.
ಮಾರುತಿ ಸುಜುಕಿ, ಹುಂಡೈ ಮೋಟರ್ ಇಂಡಿಯಾ, ಮಹೀಂದ್ರ ಆ್ಯಂಡ್ ಮಹೀಂದ್ರ, ಹೋಂಡಾ ಮತ್ತು ಔಡಿ ಕಂಪನಿಗಳು ಜನವರಿಯಿಂದ ಬೆಲೆ ಹೆಚ್ಚಳ ಮಾಡುವುದಾಗಿ ಈಗಾಗಲೇ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.