
ಪಿಟಿಐ
ಟಾಟಾ ಪವರ್
ನವದೆಹಲಿ: ಟಾಟಾ ಪವರ್ ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 14ರಷ್ಟು ಹೆಚ್ಚಾಗಿದ್ದು ₹1,245 ಕೋಟಿಗೆ ತಲುಪಿದೆ. ಕಂಪನಿಯು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹1,093 ಕೋಟಿ ಲಾಭ ಗಳಿಸಿತ್ತು.
ಕಂಪನಿಯ ವರಮಾನವು ಶೇ 3ರಷ್ಟು ಹೆಚ್ಚಾಗಿದ್ದು ₹15,769 ಕೋಟಿಗೆ ತಲುಪಿದೆ.
ಭೂತಾನ್ ದೇಶದಲ್ಲಿ 1,125 ಮೆಗಾವಾಟ್ ಸಾಮರ್ಥ್ಯದ ದೊರ್ಜಿಲಂಗ್ ಜಲ ವಿದ್ಯುತ್ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಲಿರುವ ಕಂಪನಿಯಲ್ಲಿ (ಎಸ್‌ಪಿವಿ) ಶೇಕಡ 40ರಷ್ಟು ಪಾಲು ಹೊಂದಲು ಟಾಟಾ ಪವರ್ ಕಂಪನಿಯು ₹1,572 ಕೋಟಿ ಹೂಡಿಕೆ ಮಾಡಲಿದೆ. ಈ ಜಲ ವಿದ್ಯುತ್ ಉತ್ಪಾದನಾ ಘಟಕವು ₹13,100 ಕೋಟಿ ಹೂಡಿಕೆಯೊಂದಿಗೆ ನಿರ್ಮಾಣ ಆಗಲಿದೆ.
ಈ ಎಸ್‌ಪಿವಿ ಇನ್ನಷ್ಟೇ ಜನ್ಮತಳೆಯಬೇಕಿದೆ ಎಂದು ಟಾಟಾ ಪವರ್ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.